UK Suddi
The news is by your side.

ರ‍್ಯಾಲಿಯಲ್ಲಿ ಕಾಲ್ತುಳಿತ, ಭಾಷಣ ಅರ್ಧಕ್ಕೆ ನಿಲ್ಲಿಸಿದ ಮೋದಿ

ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿರ ಬೃಹತ್‌ ರ‍್ಯಾಲಿ ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ ಅನೇಕರು ಗಾಯಗೊಂಡ ಕಾರಣ, ಮೋದಿ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು.

ಲೋಕಸಭಾ ಚುನಾವಣೆಗೂ ಮುನ್ನ ನಡೆದ ಬಿಜೆಪಿ ಪ್ರಚಾರ ರ‍್ಯಾಲಿಯಲ್ಲಿ ಅಕ್ಷರಶಃ ಕಿಕ್ಕಿರಿದು ಜನಸಾಗರ ಸೇರಿದ್ದ ನಡುವೆ ಈ ಅವಘಡ ಸಂಭವಿದೆ.

ನೆರೆದಿದ್ದ ಜಸ್ತೋಮವನ್ನು ಕಂಡು ಅಚ್ಚರಿಗೊಂಡ ಪ್ರಧಾನಿ, ಮೈದಾನದ ಸಾಮರ್ಥ್ಯ ಬಹಳ ಚಿಕ್ಕದಿದ್ದ ಕಾರಣ ಶಾಂತಿ ಕಾಪಾಡಿಕೊಳ್ಳಲು ಸೂಚಿಸಿದರು.

“ನಿಮ್ಮ ಕಾತರವನ್ನು ಕಂಡು ಪ್ರಸನ್ನನಾಗಿದ್ದೇನೆ. ಇಲ್ಲಿ ನೆರೆದಿರುವ ಜನಕ್ಕೆ ಈ ಜಾಗ ಬಹಳ ಚಿಕ್ಕದು. ನೀವೆಲ್ಲಿದ್ದೀರೋ ಅಲ್ಲೇ ಇರಿ. ದಯವಿಟ್ಟು ಶಾಂತಿ ಕಾಪಾಡಿಕೊಳ್ಳಿ”ಎಂದು ಮನವಿ ಮಾಡಿಕೊಂಡರು. ಹೀಗಾಗಿ ಪ್ರಧಾನಿ ತಮ್ಮ ಭಾಷಣವನ್ನು 14 ನಿಮಿಷಕ್ಕೆ ಮೊಟಕುಗೊಳಿಸಬೇಕಾಯಿತು.

Comments