UK Suddi
The news is by your side.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಎಕಾಏಕಿ ದಾಳಿ: ಪ್ರಮುಖ ಆರೋಪಿ ಪರಾರಿ..

ಮಂಗಳೂರು:‌ ಇತಿಚೀನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಮಸಾಜ್ ಪಾರ್ಲರ್ಗಳು ಮತ್ತು ವೇಶ್ಯಾವಾಟಿಕೆ ಹೆಚ್ಚಾಗಿ ‌ನಡೆಯುತ್ತಿದೆ ಎಂಬ ಆರೋಪಗಳಿತ್ತು.ಅದರ ದೂರಿನಂತೆ ಪೊಲೀಸ್ ಇಲಾಖೆ ವೇಶ್ಯಾವಾಟಿಕೆ ಅಡ್ಡೆಗೆ‌ ದಾಳಿ ನಡೆಸಿದೆ.ಇನ್ನೂ ಕೆಲವು ಲಾಡ್ಜ್ ಮತ್ತು ಮನೆಗಳಲ್ಲಿ ರಾಜರೋಷವಾಗಿ ಮಂಗಳೂರು ನಗರದಲ್ಲಿ ವೇಶ್ಯಾವಾಟಿಕೆ ಮತ್ತು ಮಸಾಜ್ ಪಾರ್ಲರ್‌ಗಳು ನಡೆಯುತ್ತಿದೆ ಎಂದು ಸಾರ್ವಜನಿಕರ ಆರೋಪಗಳಿವೆ.

ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಶಕ್ತಿನಗರ ಎಂಬಲ್ಲಿ ಫ್ಲಾಟ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ಅಡ್ಡೆ ಮೇಲೆ ನಗರದ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ಶಕ್ತಿನಗರದ ಪ್ಲಾಟ್ ವೊಂದರಲ್ಲಿ ಗಿರೀಶ್ ಎಂಬಾತನ ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಗಿರೀಶ್ ಎಂಬಾತನು ತಲೆ ಮರೆಸಿಕೊಂಡಿದ್ದು, ಇಬ್ಬರು ನೊಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ನೊಂದ ಮಹಿಳೆಯರಿಗೆ ವೇಶ್ಯಾವಾಟಿಕೆ ನಡೆಸುವಂತೆ ಪುಸುಲಾಯಿಸಿ ವೇಶ್ಯಾವಾಟಿಕೆಗೆ ಆಹ್ವಾನಿಸುತ್ತಿದ್ದ ಗಿರೀಶ್ ಎಂಬಾತನ ವಿರುದ್ಧ ಐ.ಟಿ.ಪಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ರಾಮಕೃಷ್ಣ, ಪೊಲೀಸ್ ನಿರೀಕ್ಷಕರು, ಇ & ಎನ್ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿಗಳು ಮತ್ತು ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್, ಪೊಲೀಸ್ ಉಪ ನಿರೀಕ್ಷಕರಾದ ಜಾನಕಿ ಹಾಗೂ ಠಾಣಾ ಸಿಬ್ಬಂದಿಗಳು ದಾಳಿಯಲ್ಲಿ ಇದ್ದರು.

Comments