UK Suddi
The news is by your side.

ಶರಣರ ಚಿಂತನೆ,ಸಂದೇಶಗಳಿಗೆ ಜೀವ ತುಂಬಿ,ಜೀವನದಲ್ಲಿ ಪಾಲಿಸಿಬೇಕು:ಜಗದೀಶ್ ಶೆಟ್ಟರ್.

ಧಾರವಾಡ:ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರಿ ಮಡಿವಾಳ ಮಾಚಿದೇವರ ಜಯಂತ್ಯೊತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ, ಶಾಸಕ ಜಗದೀಶ ಶೆಟ್ಟರ್ ‘ವಿವಿಧ ಸಮಾಜ, ಸಮುದಾಯಗಳ ಸಹಯೋಗದಲ್ಲಿ ಶರಣರ, ಮಹಾತ್ಮರ ಜಯಂತಿಗಳನ್ನು ಸರ್ಕಾರ ಆಯೋಜಿಸುತ್ತಿದೆ.ಸಮಾಜದ ಸಾಮರಸ್ಯ, ಸಹಬಾಳ್ವೆ ಮತ್ತು ಪರಸ್ಪರ ಪ್ರಿತಿ, ವಿಶ್ವಾಸಗಳನ್ನು ವೃದ್ಧಿಗೊಳಿಸಲು ಇದು ಸಹಾಯವಾಗುತ್ತದೆ.೧೨ನೇ ಶತಮಾನ ಶರಣರ ಚಳುವಳಿಯ ನೇತೃತ್ವ ವಹಿಸಿದ್ದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ಶರಣರಲ್ಲಿ ಕಾಯಕ ನಿಷ್ಠೆ ಹೊಂದಿದ್ದ ವೀರ ಶರಣ ಮಡಿವಾಳ ಮಾಚಿದೇವ.
ಬಸವಣ್ಣನವರ ಕಾಯಕವೇ ಕೈಲಾಸ ನಿಯಮವನ್ನು ಚಾಚುತಪ್ಪದೆ ತಮ್ಮ ಬದುಕಿನುದ್ದಕೂ ಪಾಲಿಸಿಕೊಂಡು ಬಂದ ಮಾಚಿದೇವರು ತಮ್ಮ ಚಿಂತನೆ ಹಾಗೂ ವಿಶಿಷ್ಟರೂಪ ವಚನಗಳನ್ನು ರಚಿಸುವುದರ ಮೂಲಕ ಮಹತ್ವದ ವ್ಯಕ್ತಿಯಾಗಿ ಎದ್ದು ಕಾಣುತ್ತಾರೆ. ಮಾಚಿದೇವರಂತಹ ಶರಣರು ಜಾತಿ, ವರ್ಗ, ಸಮುದಾಯಗಳನ್ನು ಮೀರಿ ಬೆಳೆದು ನಿಂತ ಪ್ರತಿಭಾವಂತರು.
ಅಪರೂಪದ ಶರಣ ಸಾಹಿತ್ಯವನ್ನು ಕಲ್ಯಾಣ ಕ್ರಾಂತಿಯಲ್ಲಿ ಸಂರಕ್ಷಿಸಿ, ಉಳವಿವರೆಗೆ ತಂದು ತಲುಪಿಸಿದ ವೀರ ಶರಣ ಎಲ್ಲರಿಗೂ ಆರ್ದಶಪ್ರಾಯ.ಶರಣರ ಚಿಂತನೆ, ಸಂದೇಶಗಳಿಗೆ ಜೀವ ತುಂಬಿ, ಜೀವನದಲ್ಲಿ ಪಾಲಿಸಿಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಾಸಕ ಅಮೃತ ದೇಸಾಯಿ ಮಾತನಾಡಿ, ಮಡಿವಾಳ ಮಾಚಿದೇವರು ತನ್ನ ಕಾಯಕದೊಂದಿಗೆ ಶರಣರ ರಕ್ಷಣೆ, ಶರಣ ಸಾಹಿತ್ಯ- ವಚನಗಳ ಸಂರಕ್ಷಣೆ ಮಾಡುವ ಮೂಲಕ ಐತಿಹಾಸಿಕ ಪುರುಷರಾಗಿದ್ದಾರೆ ಎಂದು ಹೇಳಿದರು.

ಮನಗುಂಡಿ ಮಹಾಮನೆಯ ಬಸವಾನಂದಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿದರು.ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ. ರಾಮಚಂದ್ರ ಕೆ. ಮಡಿವಾಳರ, ಜಿಲ್ಲಾ ಆಯುಷ ಅಧಿಕಾರಿ ಡಾ, ಸಂಗಮೇಶ ಕಲಹಾಳ, ಪಾಲಿಕೆ ಸದಸ್ಯ ಶಂಕರ ಶಳಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

-Dharawad VB

Comments