UK Suddi
The news is by your side.

ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಆಂಗ್ಲ ಮಾದ್ಯಮ ಕಲಿಕೆ ಅವಶ್ಯ:ತಹಶೀಲ್ದಾರ್ ಮುರಳೀಧರ ತಳ್ಳಿಕೇರಿ.

ಮೂಡಲಗಿ(ಬೆಳಗಾವಿ):ರಾಷ್ಟ್ರೀಯ ಐಕ್ಯತೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಹಾಗೂ ಅಭಿವೃದ್ಧಿ ಪರವಾಗಿ ಬೆಳವಣಿಗೆ ಹೊಂದಲು ಮಾತೃ ಭಾಷೆಯೊಂದಿಗೆ ಆಂಗ್ಲ ಮಾದ್ಯಮ ಕಲಿಕೆಯು ಅವಶ್ಯಕವಾಗಿದೆ ಎಂದು ಮೂಡಲಗಿ ತಹಶೀಲ್ದಾರ ಮುರಳಿದರ ತಳ್ಳಿಕೇರಿ ಹೇಳಿದರು.

ಅವರು ಶುಕ್ರವಾರ ಸಾಂಯಕಾಲ ಜರುಗಿದ ಎನ್ ಎನ್ ಸೋನವಾಲಕರ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸದಲ್ಲಿ ಭಾಗವಹಿಸಿ ಮಾತನಾಡಿದರು. ಮಾತೃ ಬಾಷೆಯೊಂದಿಗೆ ಭವಿಷ್ಯತ್ತಿನ ಭಾಷೆಯಾಗಿರುವ ಆಂಗ್ಲ ಭಾಷೆಯ ಬಗ್ಗೆ ತಿಳಿದುಕೊಂಡರೆ ಅತೀ ಹೆಚ್ಚಿನ ಜ್ಞಾನವನ್ನು ಪಡೆಯಬಹುದು.ಮೂಡಲಗಿ ತಾಲೂಕಿನ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಮೆಚ್ಚುವಂತಹದಾಗಿದೆ. ಮಗುವಿನ ಭದ್ರ ಬುನಾದಿ ಎಂದರೆ ಪ್ರಾಥಮಿಕ ಶಿಕ್ಷಣವಾಗಿದ್ದು ತಳಪಾಯವನ್ನು ಗಟ್ಟಿಗೋಳಿಸುವ ಕಾರ್ಯ ಶಿಕ್ಷಕ ಪಾಲಕ ಹಾಗೂ ಈ ಸಮಾಜದ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅತಿಥಿಗಳಾದ ಬಿ.ಇ.ಓ ಅಜೀತ ಮನ್ನಿಕೇರಿ ಮಾತನಾಡಿ, ಕುಟುಂಬದೊಂದಿಗೆ ಸೌಹಾರ್ದಯುತವಾಗಿ ಬಾಳುವ ಮೂಲಕ ಮಗುವಿನ ನೈತಿಕ ಮಟ್ಟಹೆಚ್ಚಿಸುವ ಕಾರ್ಯ ನಮ್ಮಿಂದಾಗಬೇಕು. ಮಗುವಿಗೆ ಪ್ರೋತ್ಸಾಹ ಕಾಳಜಿಯುತವಾದ ನಡೆನುಡಿಗಳಿಂದ ಮಗುವಿನಲ್ಲಿ ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಕಾರ್ಯ ಪಾಲಕರ ಶಿಕ್ಷಕರ ಮೇಲೆ ಜವಬಾಬ್ದಾರಿಯುತ ಕೆಲಸವಾಗಿದೆ. ಫೇಬ್ರವರಿ ಮಾರ್ಚ ತಿಂಗಳುಗಳು ಪರೀಕ್ಷಾ ತಯಾರಿ ತಿಂಗಳುಗಳಾಗಿದ್ದು ಮಗುವಿನ ಭವಿಷ್ಯ ರೂಪಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದರು.

ಮೂಡಲಗಿ ಪೋಲಿಸ್ ವೃತ್ತ ನಿರೀಕ್ಷಕ ವೇಂಕಟೇಶ ಮುರನಾಳ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿಸಬೇಕು. ಪ್ರತಿದಿನವು ಪಾಲಕರಾದ ನಾವು ಮಕ್ಕಳ ಬಗ್ಗೆ ಗಮನ ಹರಿಸುತ್ತಿರಬೇಕು. ಭವ್ಯ ಭಾರತದ ಪ್ರಜೆಗಳ ನಿರ್ಮಾಣ ಕಾರ್ಯ ಶಿಕ್ಷಣದಿಂದ ಮಾತ್ರ ಸಾದ್ಯ ಎಂದು ಹೇಳಿದರು.

ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಆಶಿರ್ವಚನ ನೀಡಿ, ಮಕ್ಕಳನ್ನು ಇಂದಿನ ಸಮೂಹ ಮಾದ್ಯಮಗಳಾದ ಟಿ.ವಿ, ಮೊಬೈಲ್ ಗಳಿಂದ ದೂರಿಡಬೇಕು. ವಿದ್ಯೆಯೇ ಬೆನ್ನೆಲುಬಾಗಿದ್ದು, ಸರಿಯಾದ ಸಂಸ್ಕಾರ ನೀಡುವ ಮೂಲಕ ಶಿಕ್ಷಣದ ಪ್ರತಿ ಮೆಟ್ಟಿಲನ್ನು ದಾಟಿ ಸಂಸ್ಕಾರಯುತ ಶಿಕ್ಷಣ ನಮ್ಮದಾಗಿರಲೆಂದು ಆಶಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಪುರಸಭೆ ಮಾಜಿ ಉಪಾಧ್ಯಕ್ಷ ರವಿ ಸೋನವಾಲಕರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಭೀಮಶಿ ಸಣ್ಣಕ್ಕಿ, ಕಾರ್ಯದರ್ಶಿ ವೇಂಕಟೇಶ ತಮ್ಮ,ಣ್ಣಪ್ಪ ಸೋನವಾಲಕರ, ವೇಂಕಟೇಶ ರಾಮಚಂದ್ರಪ್ಪ ಸೋನವಾಲಕರ, ಸಂದೀಪ ಸೋನವಾಕರ, ಸಚೀನ ಸೋನವಾಲಕರ, ಆಡಳಿತಾಧಿಕಾರಿ ಸುಮತಿ ಸೋನವಾಲಕರ, ಬಿ.ಆರ್.ಪಿ ಕೆ.ಎಲ್.ಮೀಶಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುನಿತಾ ಸುಣಧೋಳಿ ನಿರೂಪಿಸಿದರು. ರೂಬಿನಾ ಚೌದರಿ ಸ್ವಾಗತಿಸಿ, ಆಮೀನಾ ಅಥಣಿ ವಂದಿಸಿದರು.
ವರದಿ: ಎಮ್.ಎಲ್.ಮೀಶಿ (ಮೂಡಲಗಿ)

Comments