UK Suddi
The news is by your side.

ಹೊನ್ನಾವರದಲ್ಲಿ ನಾಳೆ ಬೃಹತ ಉದ್ಯೋಗ ಮೇಳ.

ಕಾರವಾರ:ಕಾರವಾರದ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 3 ರಂದು ಬೆಳಿಗ್ಗೆ 9.30 ರಿಂದ ಸಂಜೆ 3-30 ರವರೆಗೆ,ಹೊನ್ನಾವರದ ಪ್ರಭಾತ ನಗರದಲ್ಲಿರುವ ಎಸ್.ಡಿ.ಎಮ್ ಮಹಾವಿದ್ಯಾಲಯದಲ್ಲಿ ಬೃಹತ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.

SSLC,PUC,ITI,DIPLOMA,BE(Mech,CS) ಹಾಗೂ ಯಾವುದೇ ಡಿಗ್ರಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.ಬಿ.ಎಸ್.ಸಿ ನರ್ಸಿಂಗ್, ಜಿ.ಎನ್.ಎಮ್ ನರ್ಸಿಂಗ್ ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬೃಹತ್ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳಾದ ವಿಕೆಡೈಡ್ ಅಡವೆನಚರ್ ಸರ್ವಿಸ್, ಪ್ರೈ.ಲಿ., ಮಣಿಪಾಲ ಹಾಸ್ಪಿಟಲ್, ಆಟೋ ಪಾಟ್ರ್ಸ ಪ್ರೈ.ಲಿ. ಕೊಂಕಣ ಕನಸ್ಟ್ರಷನ್ಸ್ ಪ್ರೈ.ಲಿ, ಹಾಗೂ ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9481403800, 9481274298 ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Comments