UK Suddi
The news is by your side.

ಇನ್ನಮುಂದೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರಗಳಲ್ಲಿ ಕ್ಲಿನಿಕ್ ನಡೆಸುವಂತಿಲ್ಲ.

ಧಾರವಾಡ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಲ್ಟ್ರಾಸೌಂಡ ಸ್ಕ್ಯಾನಿಂಗ್ ಕೇಂದ್ರಗಳೆಂದು ನೋಂದಣಿಗೊಂಡಿದ್ದು ಇರುತ್ತದೆ. (ಡೈಗ್ನೊಸ್ಟಿಕ್ ಸೆಂಟರ್) ಆದರೆ ಈ ಕೇಂದ್ರಗಳಲ್ಲಿ ಬೆಂಗಳೂರಿನ ಕೆಲವು ಪ್ರತಿಷ್ಠಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳರವರು ಪ್ರತಿ ತಿಂಗಳು ಕ್ಲಿನಿಕ್ ನಡೆಸುತ್ತಿರುವುದಾಗಿ ಕಂಡು ಬಂದಿರುತ್ತದೆ.ಅಲ್ಲದೆ ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರ ಮಾಡುತ್ತಿರುವುದು ಕೂಡಾ ಕಂಡು ಬಂದಿರುತ್ತದೆ. ಡೈಗ್ನೊಸ್ಟಿಕ್ ಕೇಂದ್ರಗಳೆಂದು ನೋಂದಣಿಗೊಂಡಿರುವ ಕೇಂದ್ರಗಳಲ್ಲಿ ಕ್ಲಿನಿಕ್ ನಡೆಸಲು ಅವಕಾಶವಿರುವುದಿಲ್ಲಾ.ಒಂದು ವೇಳೆ ಆಸ್ಪತ್ರೆಗಳಲ್ಲಿ, ಪಾಲಿ ಕ್ಲಿನಿಕ್‌ಗಳಲ್ಲಿ ಮತ್ತು ಇತ್ಯಾದಿ ವೈದ್ಯಕೀಯ ಸಂಸ್ಥೆಗಳಲ್ಲಿ ಸೂಪರ ಸ್ಪೆಷಾಲಿಟಿ (ಯಾವುದೇ ಅಧಿಕೃತ ವೈದ್ಯಕೀಯ ಸಂಸ್ಥೆಯವರು) ಕ್ಲಿನಿಕ (ಶಿಬಿರ) ನಡೆಸಬೇಕಾದಲ್ಲಿ ಜಿಲ್ಲಾ ನೋಂದಣಿ ಪ್ರಾಧಿಕಾರದಿಂದ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸಿ ಅನುಮತಿ ಪಡೆದು ತದನಂತರ ಕ್ಲಿನಿಕ್‌ಗಳನ್ನು ನಡೆಸುವುದು.ಯಾವುದೇ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯವರು ಡೈಗ್ನೊಸ್ಟಿಕ್ ಕೇಂದ್ರಗಳಲ್ಲಿ ಕ್ಲಿನಿಕ್ ನಡೆಸುವಂತಿಲ್ಲಾ ಒಂದು ವೇಳೆ ಕ್ಲಿನಿಕ್ ನಡೆಸುತ್ತಿರುವುದು ಕಂಡು ಬಂದಲ್ಲಿ ಅಂತಹ ವೈದ್ಯರ / ಆಸ್ಪತ್ರೆಯವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.

ಅಲ್ಲದೇ,ಕರ್ನಾಟಕ ಖಾಸಗಿ ವೈದ್ಯಕೀಯ ಸೇವೆಗಳ ಅಧಿನಿಯಮ 2007 ಮತ್ತು 2009 ರ ನಿಯಮಗಳನ್ವಯ ಈಗಾಗಲೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದು ಅವುಗಳ ನೋಂದಣಿ ಅವಧಿಯು ಮುಕ್ತಾಯವಾಗಿರುತ್ತದೆ. ಆದರೆ ಇಲ್ಲಿಯವರೆಗೆ ನೋಂದಣಿ ಅವಧಿಯನ್ನು ನವೀಕರಣ ಮಾಡಿಕೊಂಡಿರುವುದಿಲ್ಲಾ ಆದ್ದರಿಂದ ಫೆಬ್ರವರಿ 28, 2019 ರೊಳಗಾಗಿ ಆನ್‌ಲೈನ್ ಮೂಲಕ (WWW.KPME.SIGN.IN) ನೋಂದಣಿ ಅವಧಿಯನ್ನು ನವೀಕರಣ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

-Dharawad VB

Comments