UK Suddi
The news is by your side.

ಜಾತಿ, ಮತ, ಭೇದ ಭಾವ ಬಿಟ್ಟು ಕನ್ನಡ ನಾಡನ್ನು ಮತ್ತಷ್ಟು ಸುಂದರವಾಗಿ ಕಟ್ಟೋಣ: ಮಲ್ಲಮ್ಮ ಮೇಗೆರಿ ಹೇಳಿಕೆ.

ಬೈಲಹೊಂಗಲ: ಕನ್ನಡ ಸಾಹಿತ್ಯ ಸಂಸ್ಕೃತಿಯ ಪರಂಪರೆಗೆ ಜನಪದ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ, ಹಿರಿಯ ಜಾನಪದ ಕಲಾವಿದೆ ಮಲ್ಲಮ್ಮ ಮೇಗೆರಿ ಹೇಳಿದರು.

ಅವರು ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಜಾನಪದ ವಿವಿಧ ಪ್ರಕಾರಗಳ ಪರಿಚಯವವನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಾಗಿದೆ. ಕನ್ನಡ ನೆಲದಲ್ಲಿ ಆಂಗ್ಲ ಭಾಷೆ ಮತ್ತು ಇತರೆ ಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಗೆ ಗಂಡಾತರ ಎದುರಾಗಲಿದ್ದು ನಾವೇಲ್ಲರೂ ಮೊದಲು ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕುವಂತೆ ದಿಟ್ಟ ಹೆಜ್ಜೆ ಇಡಬೇಕಾಗಿದೆ. ಕನ್ನಡವೇ ನಮ್ಮೇಲ್ಲರ ಸಂಪತ್ತಾಗಬೇಕಾಗಿದೆ ಎಂದರು.

ಈ ದಿಸೆಯಲ್ಲಿ ಜಾತಿ,ಮತ, ಪಂತ, ಎಂದು ಭೇದ ಭಾವ ಮಾಡದೇ ಕನ್ನಡ ನಾಡನ್ನು ಮತ್ತಷ್ಟು ಸುಂದರವಾಗಿ ಕಟ್ಟಬೇಕಾಗಿದೆ. ಸಮ್ಮೇಳನಗಳು ಆದರ್ಶಗಳಾಗಿ ಕಣ್ಮುಂದೆ ನಿಂತಾಗ ಮಾತ್ರ ಕರ್ನಾಟಕದ ಏಕಿಕರಣಕ್ಕೆ ಮತ್ತು ಕನ್ನಡದ ಹೋರಾಟಗಾರರ ಆತ್ಮಕ್ಕೆ ನಿಜವಾದ ಜಯ ಸಿಗಲಿದೆ ಎಂದರು.

ಬೈಲಹೊಂಗಲ ನಾಡು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಾಹಸ, ಶೌರ್ಯ ಪರಂಪರೆಗಳಿಂದ ಕೂಡಿದ ಪರಿಣಾಮ ಈ ಮಣ್ಣಿನ ಆಗಾದ ಶಕ್ತಿಯ ಕಣದಲ್ಲಿ ಅಪಾರ ಶಕ್ತಿ ಹೊಂದಿದೆ. ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪನಂತಹ ಶೌರ್ಯ ಸಾಹಸದ ಪ್ರತಿಕವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಸುವರ್ಣಾಕ್ಷರಗಳಲ್ಲಿ ಬರೆದು ಇಡುವಂತಾಗಿದೆ.

ಸಾಹಿತ್ಯ ದಿಗ್ಗಜ ಕನ್ನಡ ಶಬ್ದಕೋಶ ಗಂಗಾಧರ ಮಡಿವಾಳೇಶ್ವರ ತುರಮರಿ ಅವರು ಬೈಲಹೊಂಗಲ ಪಟ್ಟಣದಲ್ಲಿ ಪ್ರಪ್ರಥಮವಾಗಿ ಕನ್ನಡ ಶಾಲೆಗಳನ್ನು ತೆರದು ಕನ್ನಡಕ್ಕಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಬೈಲಹೊಂಗಲ ಎಂದರೆ ಜನಪದ, ಜನಪದ ಎಂದರೆ ಬೈಲಹೊಂಗಲ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ನನ್ನಂತಹ ಜಾನಪದ ಕಲಾವಿದೆಯನ್ನು ಆಯ್ಕೆ ಮಾಡಿರುವುದಕ್ಕೆ ನನ್ನ ಜೀವನದಲ್ಲಿ ಎಂದು ಮರೆಯಲಾಗದ ದಿನ ಎಂದರು.

ವರದಿ: ಚಿದಂಬರ ಕುರುಬರ

Comments