UK Suddi
The news is by your side.

ಧಾರವಾಡದಲ್ಲಿ ಫೆ.15ರಂದು ಸಂತ ಸೇವಾಲಾಲರ ಜಯಂತ್ಯುತ್ಸವ.

ಧಾರವಾಡ:ಬರುವ ಫೆಬ್ರುವರಿ 15 ರಂದು ಸಂತ ಸೇವಾಲಾಲ್‌ರ ಜಯಂತಿಯನ್ನು ಮತ್ತು ಫೆಬ್ರುವರಿ 20 ರಂದು ಕವಿ ಸರ್ವಜ್ಞರ ಜಯಂತಿಯನ್ನು ಜಿಲ್ಲಾಡಳಿತದಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ತಿಳಿಸಿದ್ದಾರೆ.

ಫೆ.15ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸಂತಸೇವಾಲಾಲ್ ಜಯಂತಿಯನ್ನು ಆಚರಿಸಲಾಗುತ್ತದೆ.ಕಾರ್ಯಕ್ರಮದಲ್ಲಿ ಡಾ.ಕೆ. ರಾಮಚಂದ್ರ ನಾಯಕ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.ವೇದಿಕೆ ಕಾರ್ಯಕ್ರಮ ಪೂರ್ವದಲ್ಲಿ ಬೆಳಗ್ಗೆ 9 ಗಂಟೆಗೆ ಸಂತ ಸೇವಾಲಾಲ್‌ರ ಭಾವಚಿತ್ರದ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ವಿದ್ಯಾವರ್ಧಕ ಸಂಘದವರೆಗೆ ನಡೆಯಲಿದೆ.

ಫೆ.20 ರಂದು ಕವಿ ಸರ್ವಜ್ಞರ ಜಯಂತಿಯನ್ನು ಸಂಜೆ 6 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಚರಿಸಲಾಗುತ್ತದೆ. ಡಾ. ರಾಜಶೇಖರ ಹೊಸಮನಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಕಲಾಭವನ ಆವರಣದಿಂದ ವಿವೇಕಾನಂದ ವೃತ್ತದ ಮೂಲಕ ಕ.ವಿ.ವಿ ಸಂಘದವರೆಗೆ ಸರ್ವಜ್ಞರ ಬಾವಚಿತ್ರದ ಮೆರವಣಿಗೆ ಜರುಗಲಿದೆ.ಜಯಂತ್ಯೊತ್ಸವದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅಪರಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ತಿಳಿಸಿದ್ದಾರೆ.

Comments