UK Suddi
The news is by your side.

ಬೈಲಹೊಂಗಲದಲ್ಲಿ ಗಾಂಧಿಯಾನ ಇದು ವಿಭಿನ್ನ ಪಯಣ ಪಾದಯಾತ್ರೆ.

ಬೈಲಹೊಂಗಲ: ಮಹಾತ್ಮಾ ಗಾಂಧೀಜಿ ಅವರ 150ನೇ ಪುಣ್ಯಸ್ಮರಣೆ ಅಂಗವಾಗಿ “ಗಾಂಧಿಯಾನ ಇದು ವಿಭಿನ್ನ ಪಯಣ” ಎಂಬ ಪಾದಯಾತ್ರೆಗೆ ರವಿವಾರ(ಇಂದು) ಬೆಳಗ್ಗೆ ಬೈಲಹೊಂಗಲ ಮತಕ್ಷೇತ್ರದ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ಪಾದಯಾತ್ರೆ ನಂತರ ಸಂಸದೀಯ ಕಾರ್ಯದರ್ಶಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವ ನಿಟ್ಟಿನಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಯುವ ಪೀಳಿಗೆಗೆ ಅನುಕೂಲಕರವಾಲಿ ಎನ್ನುವ ಉದ್ದೇಶದಿಂದ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಗ್ರಾಮ ಸಭೆಗೆ ಹೆಚ್ಚಿನ ಅಧಿಕಾರ ನೀಡಿದ್ದು ಶ್ಲಾಘನೀಯವಾದದ್ದು ಗಾಂಧೀಜಿ ವಿಚಾರಧಾರೆಗಳನ್ನು ಹೊಂದಿರುವ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್‌, ಪ್ರಖರ ವಾಗ್ಮಿಗಳು ಹಾಗೂ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ಬಿ.ಎಲ್.ಶಂಕರ್‌ ಅವರ ನೇತೃತ್ವದಲ್ಲಿ ಗಾಂಧಿಯಾನ ಪಾದಯಾತ್ರೆ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಇಲ್ಲಿಂದ ಈ ಪಾದಯಾತ್ರೆ ಬೆಳಗಾವಿಯ ಹುದಲಿ ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಗಲಕೋಟ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ, ಡಾ: ಮಹಾಂತೇಶ ಕಳ್ಳಿಬಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಮಹಾಂತೇಶ ಮತ್ತಿಕೊಪ್ಪ, ರಂಗಸ್ವಾಮಿ ಉಮೇಶ ಬಾಳಿ, ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ, ಕಿರಣ ಸಾಧುನವರ, ಶಿವರುದ್ರಪ್ಪ ಹಟ್ಟಿಹೋಳಿ, ಶಂಕರಗೌಡ ಪಾಟೀಲ, ಈರಣ್ಣ ಬೆಟಗೇರಿ, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.

ವರದಿ: ಚಿದಂಬರ ಕುರುಬರ

Comments