UK Suddi
The news is by your side.

ಬೈಲಹೊಂಗಲದ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಕಣ್ಮನ ಸೆಳೆದ ಅದ್ಧೂರಿ ಮೆರವಣಿಗೆ.

ಬೈಲಹೊಂಗಲ: ಪಟ್ಟಣದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ತಾಯಿ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷೆ, ಹಿರಿಯ ಖ್ಯಾತ ಕಲಾವಿದೆ ಮಲ್ಲಮ್ಮ ಮೆಗೇರಿ ಅವರ ಕುದುರೆ ಸಾರೋಟ ಮೆರವಣಿಗೆ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು.

ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಶಾಖಾ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಪೂಜೆ ಸಲ್ಲಿಸಿದರು. ಮೆರವಣಿಗೆಗೆ ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಚಾಲನೆ ನೀಡಿದರು.

ಜವಳಿಕೂಟದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬಜಾರ ರಸ್ತೆ ಮಾರ್ಗವಾಗಿ ಸಮಾರಂಭದ ವೇದಿಕೆಯವರೆಗೆ ತೆರಳಿತು. ರಸ್ತೆಯುದ್ದಕ್ಕೂ ವಿವಿಧ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಸಾಗಿದರು. ವಿವಿಧ ಶಾಲಾ ಮಕ್ಕಳ ಮಹಾತ್ಮರ, ಶೂರರ ರೂಪಕಗಳು ನಾನಾ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯು ನೋಡುಗರ ಕಣ್ಮನ ಸೆಳೆಯಿತು.

ಧ್ವಜಾರೋಹಣ:

ಶಿವಬಸವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ರಾಷ್ಟ್ರಧ್ವಜ, ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನಾಡಧ್ವಜ, ತಾಲ್ಲೂಕು ಘಟಕ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲ್ಲೂಕು ಘಟಕ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ, ಅನ್ನಪೂರ್ಣಾ ಕನೋಜ, ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಪ್ರಮೋದಕುಮಾರ ವಕ್ಕುಂದಮಠ, ಪ್ರೊ.ಡಾ.ಸಿ.ಬಿ. ಗಣಾಚಾರಿ, ಎಫ್.ಎಸ್. ಹರಕುಣಿ, ಮಹಾಂತೇಶ ಅಕ್ಕಿ, ಬಸವರಾಜ ತಟವಟಿ, ವಿರುಪಾಕ್ಷ ಕೋರಿಮಠ, ಬಸವರಾಜ ಭರಮಣ್ಣವರ, ಎಸ್.ಆರ್.ಕಮ್ಮಾರ, ಮಹಾಂತೇಶ ಕಳ್ಳಿಬಡ್ಡಿ, ಎ.ಎಚ್.ರಾಯಭಾಗ, ಎಂಜಿಕೆ ಹಿರೇಮಠ, ಸದಾನಂದ ಸಂಪಗಾವಿ, ಶ್ರೀಶೈಲ ಶರಣಪ್ಪನವರ, ಮಹೇಶ ಕೋಟಗಿ, ಚಂದ್ರಶೇಖರ ಕೊಪ್ಪದ, ಶಿವಯೋಗಿ ಹುಲ್ಲೆನ್ನವರ, ನಿಂಗಪ್ಪ ಬೂದಿಹಾಳ, ಎಂ.ಪಿ.ತಿಪ್ಪಿಮಠ, ಎಸ್.ಕೆ.ಮರಕುಂಬಿ, ಎಂ.ಎಂ.ಕೋಲಕಾರ, ಜಿ.ಬಿ.ತುರಮರಿ, ನಿವೃತ್ತ ಪ್ರೊ.ಸಿ.ವಿ.ಜ್ಯೋತಿ, ಶಿವಪ್ರಸಾದ ಹುಲ್ಲೆಪ್ಪನವರಮಠ, ಹಾಗೂ ಅನೇಕರು ಇದ್ದರು.

ಸಾಹಿತಿ ಚನ್ನಪ್ಪ ಹೊಸಮನಿ, ಪ್ರೇಮಾ ಅಂಗಡಿ, ಶಶಿಕಲಾ ಯಲಿಗಾರ, ಆರ್.ಜಿ. ಯಲಿಗಾರ, ಶ್ರೀಕಾಂತ ಸಂಪಗಾಂವಿ, ಎ.ಎಚ್.ರಾಯಭಾಗ, ಶಂಕರೆಪ್ಪ ತುರಮರಿ, ಜಿ.ಜಿ.ರಜಪೂತ, ಪ್ರಕಾಶ ಪೂಜಾರ, ಉಷಾ ಬೋಳನ್ನವರ, ಲಕ್ಷ್ಮೀ ಮುಗಡ್ಲಮಠ, ಶಶಿಕಲಾ ಏಣಗಿ, ಎ.ಎಸ್.ಪೂಜೇರಿ, ಎಸ್.ಎ. ಪೆಂಡಾರಿ, ಅಶ್ವಿನಿ ಸಂಗೊಳ್ಳಿ, ರೇಖಾ ಭುವಿ, ಮಹಾದೇವಿ ಜ್ಯೋತಿ, ಕುಮಾರಗೌಡ ತಲ್ಲೂರ, ಜ್ಯೋತಿ ಬದಾಮಿ, ಎಂ.ವೈ.ಮೆಣಸಿನಕಾಯಿ, ರತ್ನಾಪ್ರಭಾ ಬೆಲ್ಲದ, ಸುರೇಶ ತಲ್ಲೂರ ಸಾವಿರಾರು ಸಾಹಿತ್ಯಾಭಿಮಾನಿಗಳು ಇದ್ದರು.

ವರದಿ: ಚಿದಂಬರ ಕುರುಬರ

Comments