UK Suddi
The news is by your side.

ಬೈಲಹೊಂಗಲ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಖರೀದಿ ಬಲು ಜೋರು..!!

ಬೈಲಹೊಂಗಲ: ತಾಲೂಕಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿರಿಧಾನ್ಯಗಳ ಪ್ರದರ್ಶನ, ಮಾರಾಟ ಹಾಗೂ ಬೆಂಗಳೂರು ನವಭಾರತ ಪಬ್ಲಿಕೇಷನ ವತಿಯಿಂದ ಪುಸ್ತಕಗಳ ಪ್ರದರ್ಶನ, ಮಾರಾಟ, ಜೈ ಮಾರುತಿ ಬುಕ್ ಸ್ಟಾಲ್ ಪುಸ್ತಕಗಳ ಮಾರಾಟ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಯಿತು.

ಖಾದಿ ಗ್ರಾಮೋದ್ಯೊಗದ ಉತ್ಪನ್ನಗಳಾದ ಜೂಬ್ಬಾ, ಪೈಜಾಮಾ, ಶಟ್ಸ್, ಪ್ಯಾಂಟು, ಜಾಕೇಟುಗಳು ನೋಡುಗರ ಕಣ್ಮನ ಸೆಳೆದರು.

ಸಮ್ಮೇಳನಕ್ಕೆ ಬಂದಿದ್ದ ಜನರು ಜೂಬ್ಬಾ, ಪೈಜಾಮಾ ಖರೀದಿ ಮಾಡಿ ಮನೆಗೆ ಕೊಂಡೊಯ್ಯದರು. ಸಮ್ಮೇಳನದಲ್ಲಿ ತೆರಯಲಾದ ಪುಸ್ತಕ ಮಳಿಗೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದು, ಪುಸ್ತಕ ಖರೀದಿ ಬಲು ಜೋರಾಗಿತ್ತು.

ವರದಿ: ಚಿದಂಬರ ಕುರುಬರ

Comments