UK Suddi
The news is by your side.

ರಾಷ್ಟ್ರಪಿತನಿಗೆ ಅವಮಾನ: ನಾಳೆ ದೇಶ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ.

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪ್ರತಿಕೃತಿಗೆ ಗುಂಡು ಹಾರಿಸಿ ಸಂಭ್ರಮಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಫೆ. 4 ರಂದು ದೇಶ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

ಮಹಾತ್ಮ ಗಾಂಧಿ ಹುತಾತ್ಮರಾದ ದಿನವನ್ನು ಹಿಂದೂ ಮಹಾಸಭಾ ಕಾರ್ಯಕರ್ತರು ಶೌರ್ಯ ದಿನವನ್ನಾಗಿ ಆಚರಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿ ಗಾಂಧೀಜಿಯ ಪ್ರತಿಮೆಗೆ ಗುಂಡು ಹಾರಿಸಿದನ್ನು ಖಂಡಿಸಿ ಆಯಾ ರಾಜ್ಯ ಕಾಂಗ್ರೆಸ್ ಕಚೇರಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಜ. 30 ರಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮ ಗಾಂಧೀಜಿ ಪ್ರತಿಕೃತಿಗೆ ನಕಲಿ ಗನ್ ನಿಂದ ಶೂಟ್ ಮಾಡುತ್ತಾ ‘ಗೋಡ್ಸೆ ಅಮರ್ ರಹೇ’ ಎಂದು ಘೋಷಣೆ ಮಾಡುವ ಮೂಲಕ ಗಾಂಧೀಜಿಯ ಪ್ರತಿಮೆಗೆ ಅವಮಾನ ಮಾಡಿದ್ದು ಮಾತ್ರವಲ್ಲದೇ ಹಿಂದೂವಾದಿ ನಾಥಾರಾಮ್ ಗೋಡ್ಸೆಯು ಗಾಂಧೀಜಿಯನ್ನು ಕೊಂದ ಕಾರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ. ಹಿಂದೂ ಮಹಾಸಭಾದ ನಾಯಕಿಯ ಈ ಅವಮಾನಕಾರಿ ಹೆಜ್ಜೆಯು ವ್ಯಾಪಕ ಟೀಕೆಗೆ ಕಾರಣವಾಗಿದೆ.

Comments