UK Suddi
The news is by your side.

ಶಾನುಬೊಗರ ಮಾತು ಕೇಳಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ.

ಮೈಸೂರು: ನಾನು ಬಿಎಸ್ಸಿ ಓದುತ್ತಿದ್ದಾಗ ಶಾನುಬೊಗರ ಮಾತು ಕೇಳಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಸುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಬಿಎಸ್ಸಿ ಓದಿನ ನಂತರ ಲಾ ಓದುವುದಾಗಿ ನಮ್ಮ ಅಪ್ಪನಿಗೆ ಹೇಳಿದ್ದೆ ಆಗ ಅವರು ನಮ್ಮ ಊರಿನಲ್ಲಿರುವ ಶಾನುಬೊಗರನ್ನು ಕೇಳಿದ್ದರು ಕುರುಬರು ಲಾ ಓದುವುದುಂಟೆ ಅದೇನಿದ್ದರು ಬ್ರಾಹ್ಮಣರು ಓದಬೇಕು ಎಂದಿದ್ದರಂತೆ.

ನಾನು ನಮ್ಮಪ್ಪನ ಜತೆ ಜಗಳ ಮಾಡಿ ನನ್ನ ಪಾಲು ಕೊಡಿ ಎಂದು ಕೇಳಿ ಹಣ ಪಡೆದು ಲಾ ಓದಿದೆ ಅವತ್ತೆನಾದರು ನಾನು ಶಾನುಬೊಗರ ಮಾತು ಕೇಳಿದ್ದರೆ ಇಂದು ನಾನು ಸಿಎಂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Comments