UK Suddi
The news is by your side.

ಶಿರಶಿಯ ಅರಣ್ಯ ಮಹಾವಿದ್ಯಾಲಯದಲ್ಲಿ ನೇಮಕಾತಿ.

ಕಾರವಾರ: ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಶಿರಶಿಯ ಅರಣ್ಯ ಮಹಾವಿದ್ಯಾಲಯ. ಒಬ್ಬ ಸಹಾಯಕ ಪ್ರಾಧ್ಯಾಪಕ ಮತ್ತು ಒಬ್ಬ ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ.

ಸ್ನಾತ್ತಕೋತ್ತರ ಪದವಿ ಜೊತೆಗೆ ನೆಟ್ ತೇರ್ಗಡೆ ಹೊಂದಿ, ನೇಮಕಾತಿ ಬಯಸುವ ಅಭ್ಯರ್ಥಿಗಳು ಪೆಬ್ರವರಿ 13 ಮುಂಜಾನೆ 10-30 ಘಂಟೆಗೆ ಶಿರಶಿ ಅರಣ್ಯ ಮಹಾವಿದ್ಯಾಲಯದ ಕಾರ್ಯಲಯದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗದೆ.

ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳನ್ನು ಹಾಗೂ ಅವುಗಳ ಎರಡು ಧೃಡೀಕೃತ ಪ್ರತಿಗಳನ್ನು ತರುವಂತೆ ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ರವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂ : 08384-2216146 ರವರನ್ನು ಸಂಪರ್ಕಿಸಬಹುದು.

Comments