UK Suddi
The news is by your side.

ಶ್ರೀಗಂಧ ಬೆಳೆಯಿರಿ ಕೋಟಿ ಕೋಟಿ ಗಳಿಸಿರಿ:ಕವಿತಾ ಮಿಶ್ರಾ.

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ್ ಗ್ರಾಮದಲ್ಲಿ ಪ್ರೇರಣಾ ಫೌಂಡೇಶನ್ ಹಾಗೂ ಪಿಕೆಪಿಎಸ್ ಐನಾಪುರ್ ಇವರ ವತಿಯಿಂದ ಕೃಷಿ ಸಿಂಚನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಮಿಶ್ರಾ ರೈತರು ಜಗತ್ತಿಗೆ ಅನ್ನ ನೀಡುವ ಶಕ್ತಿ ಉಳ್ಳವರು ಒಂದು ಸಮಯದಲ್ಲಿ ಅವರಿಗೆ ಅನ್ನ ಸಿಗದಿರುವುದು ದುರದೃಷ್ಟಕರ.
ಒಂಟಿ ಬೆಳೆ ಪದ್ಧತಿ ಮಾರಕ ಬಹುಬೆಳೆ ಪದ್ಧತಿ ಪೂರಕ ಹೀಗಾಗಿ ರೈತರು ಜಾಗೃತರಾಗಿ ಮಿಶ್ರ ಬೆಳೆ ಬೇಸಾಯವನ್ನು ಅಳವಡಿಸಿಕೊಳ್ಳುವುದು ಸೂಕ್ತ.
ಅದೇ ರೀತಿ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು ಭಿಕ್ಷೆ ಅಲ್ಲ ಎಂದರು.

ರೈತರು ಆದಷ್ಟು ಸಾವಯುವ ಗೊಬ್ಬರಗಳನ್ನು ಬಳಸುವುದರಿಂದ ಭೂಮಿ ಹಾಳಾಗುವುದಿಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧಕ್ಕೆ ಭಾರಿ ಬೇಡಿಕೆ ಇದ್ದು ಅದರಲ್ಲಿಯೂ ನಮ್ಮ ಕರ್ನಾಟಕ ಹಾಗೂ ತಮಿಳು ನಾಡಿನ ಶ್ರೀಗಂಧಕ್ಕೆ ಭಾರಿ ಬೇಡಿಕೆ ಇದೆ ಎಲ್ಲ ರೈತರು ತಮ್ಮ 1 ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆ ಯನ್ನು ಮಾಡಿ ಕೋಟ್ಯಾಧೀಶರ ಆಗಬಹುದು ಕವಿತಾ ಮಿಶ್ರಾ ಹೇಳಿದರು.

ಇದೇ ವೇಳೆ ಮಾತನಾಡಿದ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಗಾಣಿಗೇರ್ ಹೊಸ ಹೊಸ ಕಾರ್ಯಕ್ರಮವನ್ನು ರೈತರಿಗಾಗಿ ಮಾಡುತ್ತಿರುವ ಪ್ರೇರಣಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕ್ರಿಯಾ ಜೆನ್ ಎಂ ಡಿ ಬಸವರಾಜ್ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ್ ಪ್ರೆರಣ ಫೌಂಡೇಶನ್ ಅಧ್ಯಕ್ಷ ಸಂಜಯ ಬಿರಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರೇಮಲತಾ ರೆಡ್ಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮನೀಷಾ ಹರಳೆ ಹಾಗೂ ಗ್ರಾಮದ ಮುಖಂಡರು ಗಳು ಹಾಗೂ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments