UK Suddi
The news is by your side.

ಹತ್ತರಗಿ ಟೋಲ್ ನಾಕಾ ಸಿಬ್ಬಂದಿಗೆ ಎಸ್ಪಿ ಸುಧೀರಕುಮಾರ: ತಕ್ಕ ಶಾಸ್ತಿ

ಬೆಳಗಾವಿ: ಜಿಲ್ಲಾ ಎಸ್ಪಿ ಸುಧೀರಕುಮಾರ ರೆಡ್ಡಿ ಅವರ ಸರಕಾರಿ ವಾಹನಕ್ಕೆ ಅನುಚಿತವಾಗಿ ವರ್ತಿಸಿದ ಹತ್ತರಗಿ ಟೋಲ್ ನಾಕಾ ಸಿಬ್ಬಂಧಿಯೊಬ್ಬನಿಗೆ ಎಸ್ಪಿ ಸುಧೀರಕುಮಾರರೆಡ್ಡಿ ತಕ್ಕ ಶಾಸ್ತಿ ಮಾಡಿದ್ದಾರೆ.

ಶನಿವಾರ ಸಂಕೇಶ್ವರದತ್ತ ತೆರಳುತ್ತಿದ್ದ ಎಸ್ಪಿ ಅವರ ವಾಹನ VIP ಮಾರ್ಗದಲ್ಲಿ ಪಾಸ್ ಆಗುತ್ತಿದ್ದಾಗ ಏಕಾಏಕಿ ವಾಹನದ ಮೇಲೆ ತಡೆ ಬಾರ್(ಸ್ಟಾಪೇಜ್ ಬಾರ್) ಬಿಟ್ಟಿದ್ದರಿಂದ ಕೆರಳಿದ ಎಸ್ಪಿ ಸುಧೀರಕುಮಾರ ರೆಡ್ಡಿ ಅನುಚಿತ ವರ್ತಿಸಿದ ಸಿಬ್ಬಂಧಿಯೊಬ್ಬನಿಗೆ ಥಪ್ಪಡ ನೀಡಿದ್ದು, ಹತ್ತರಗಿ ಟೋಲ್ ನಾಕಾ ಸಿಬ್ಬಂಧಿಗೆ ಸೂಕ್ತ ಎಚ್ಚರಿಕೆ ನೀಡಿದ್ದಾರೆ. ಕರ್ತವ್ಯನಿರತ ಸರಕಾರಿ ವಾಹನಗಳು ಮತ್ತು ಜನತೆಯೊಂದಿಗೆ ಸೌಹಾರ್ಧಯುತವಾಗಿ ನಡೆದುಕೊಳ್ಳುವಂತೆ ಎಸ್ಪಿ ಸುಧೀರಕುಮಾರರೆಡ್ಡಿ ಸೂಚಿಸಿದ್ದಾರೆ.

ಬೆಳಗಾವಿಯಿಂದ ಸಂಕೇಶ್ವರದತ್ತ ಹೊರಟಿದ್ದ ಎಸ್ಪಿ ವಾಹನ ನೋಡಿಯೂ ಬಾರ್ ಬಿಟ್ಟಿದ್ದರಿಂದ ವಾಹನಕ್ಕೆ ಜಖಂ ಆಯಿತು. ಈ ಅಸಹಜ ವರ್ತನೆ ಮಾಡಿದ ಹತ್ತರಗಿ ಟೋಲ್ ನಾಕಾಗೆ ಈಗ ನಡುಕ ಹುಟ್ಟಿದೆ. ದಿನನಿತ್ಯ ಸಂಚರಿಸುವ ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ದರ್ಪದಿಂದ ವರ್ತಿಸುತ್ತಿರುವ ಟೋಲ್ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಎಸ್ಪಿ ಜೊತೆಗೆ ಇದು ಎರಡನೇ ಅನುಚಿತ ವರ್ತನೆ ಎಂಬುವುದು ತಿಳಿದು ಬಂದಿದೆ.

Comments