UK Suddi
The news is by your side.

ಹಳಿ ತಪ್ಪಿದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು; 6 ಜನ ಪ್ರಯಾಣಿಕರ ಸಾವು

ಪಾಟ್ನಾ: ಬಿಹಾರದಲ್ಲಿ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ರೈಲಿನಲ್ಲಿದ್ದ ಸುಮಾರು 6 ಮಂದಿ ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇಂದು ಬೆಳಗಿನ ಜಾವ ಸುಮಾರು 3.52ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪ್ರಯಾಣಿಕರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಅಪಘಾತ ಸಂಭವಿಸಿದೆ. ಮೂಲಗಳ ಪ್ರಕಾರ ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ಬಿಹಾರದ ಸೋನಪುರ ರೈಲು ನಿಲ್ದಾನದ  ವ್ಯಾಪ್ತಿಯಲ್ಲಿ ಹಳಿ ತಪ್ಪಿದ್ದು, ರೈಲಿನ ಸುಮಾರು 9 ಬೋಗಿಗಳು ನೆಲಕ್ಕುರುಳಿವೆ. ಪರಿಣಾಮ ಈ ಬೋಗಿಗಳಲ್ಲಿದ್ದ ಕನಿಷ್ಟ 6 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಘಟನಾ ಪ್ರದೇಶಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೇ ಪೋಲಿಸರು ದೌಡಾಯಿಸಿದ್ದು, ರೈಲಿನಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಸಹಾಯವಾಣಿ:

Sonpur — 06158221645

Hajipur —06224272230

Barauni — 0627923222.

Comments