UK Suddi
The news is by your side.

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಎಸ್.ಎನ್.ಪ್ರಸಾದ.

ಬೆಂಗಳೂರು:ರಾಜ್ಯ ತೆರಿಗೆ ಸಲಹೆಗಾರರ ಸಂಘದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಎಸ್. ಎನ್. ಪ್ರಸಾದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ಪತ್ರಕಾ ಪ್ರಕಟನೆಯಲ್ಲಿ ತಿಳಿಸಿದರು.

ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ರಾಜ್ಯ ಘಟಕಕ್ಕೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯದರ್ಶಿಯಾಗಿ ವಿಷ್ಣು ಜಮಖಂಡಿ, ಕೋಶಾಧಿಕಾರಿಯಾಗಿ ಸೋಮಲಿಂಗಪ್ಪ ಸೋಲಾರಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಪ್ರಶಾಂತ. ವ್ಹಿ. ಹಂಚಾಟೆ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದ ನಾಲ್ಕು ವಲಯಗಳ ಉಪಾಧ್ಯಕ್ಷರಾಗಿ ಬೆಳಗಾವಿ ವಲಯದಿಂದ ಮಹಾಂತೇಶ ಮೂದ್ನೂರ, ಕಲಬುರ್ಗಿ ವಲಯದಿಂದ ಪಿ. ಎ. ಚಿಲ್ಲಾಳ, ಮೈಸೂರು ವಲಯದಿಂದ ವಿಶ್ವನಾಥ ಅವರು ಅವಿರೋಧವಾಗಿ ಅಸಯ್ಕೆಯಾಗಿದ್ದಾರೆಂದು ಹೇಳಿದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಎನ್. ಪ್ರಸಾದ ರವರು ತಾವು ಹಾಕಿಕೊಂಡ ಯೋಜನೆಗಳ ಬಗ್ಗೆ ತಿಳಿಸಿದರು ಮತ್ತು ಎಲ್ಲ ಸದಸ್ಯರ ಸಹಕಾರ ಕೋರಿದರು.

ಈ ಸಂಧರ್ಬದಲ್ಲಿ ಸಂಸ್ಥಾಪಕ ಅಧ್ಯಕ್ಷರಾಗಿದ್ದ ವ್ಹಿ. ಬಿ. ಹೊಂಬಳ ರವರು ಸಂಘಕ್ಕೆ ನೀಡಿದ ಕೊಡುಗೆಯನ್ನು ಸಭೆಯು ಸ್ಮರಿಸಿತು.

ನಿಕಟ ಪೂರ್ವ ಕಾರ್ಯದರ್ಶಿಯಾಗಿದ್ದ ಎಸ್. ಪ್ರಕಾಶರವರು ವರದಿಯನ್ನು ಓದಿದರು, ಕೋಶಾಧಿಕಾರಿ ಫಣೀಂದ್ರ ಅವರು ಲೆಕ್ಕ ಪತ್ರಗಳನ್ನು ಮಂಡಿಸಿದರು

ಸಭೆಯಲ್ಲಿ ಮಾಜಿ ರಾಜ್ಯ ಅಧ್ಯಕ್ಷರಾದ ಎಲ್. ಬಿ. ಬನ್ನಿಕೊಪ್ಪ, ಎಲ್ಲ ನಿಕಟ ಪೂವ ವಲಯ ಉಪಾಧಗಯಕ್ಷರು ಉಪಸ್ಥಿತರಿದ್ದರು.

Comments