UK Suddi
The news is by your side.

ಜಿಲ್ಲಾ ಕಾಂಗ್ರೆಸ್ ಪ.ಜಾ ಘಟಕದ ನೂತನ ಅಧ್ಯಕ್ಷರಾಗಿ ಸಿದ್ಧಾರ್ಥ ಶಿಂಧೆ ಆಯ್ಕೆ.

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿಯ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ನೂತನ ಅಧ್ಯಕ್ಷರಾಗಿ ಸಿದ್ಧಾರ್ಥ ಶಿಂಧೆ ಇವರನ್ನು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವರಾದ ಸತೀಶ್ ಜಾರಕಿಹೊಳಿ ರವರು ಆಯ್ಕೆ ಮಾಡಿ ಆದೇಶ ಪ್ರಮಾಣ ಪತ್ರ ನೀಡಿದರು.

ಸಿದ್ಧಾರ್ಥ ಶಿಂಧೆ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಶ್ರಮಿಸಿದ ಹಾಗೂ ಅನುಮೋದನೆ ಸೂಚಿಸಿದ ಮಾಜಿ (ಕೆ.ಆರ್.ಡಿ. ಸಿ.ಎಲ್)ಮಾಜಿ ಅಧ್ಯಕ್ಷರಾದ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಮಹಾವೀರ ಮೋಹಿತೆ ರವರನ್ನು ಸಿದ್ಧಾರ್ಥ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಮಯದಲ್ಲಿ ಮಾಜಿ ಶಾಸಕರಾದ ವೀರಕುಮಾರ ಪಾಟೀಲ ಚಿಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹಾಗೂ ಅಥಣಿ ತಾಲ್ಲೂಕಿನ ಮುಖಂಡರಾದ ಸಂಜು ಕಾಂಬಳೆ, ಚಿದಾನಂದ ತಳಕಿರೆ ಮತ್ತು ಅನೇಕ ಗಣ್ಯರು ಭಾಗಿಯಾಗಿದ್ದರು.

Comments