UK Suddi
The news is by your side.

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಟ್ರಾಕ್ಟರ್-ಓರ್ವ ಸಾವು.

ಮುಂಡಗೋಡ(ಕಾರವಾರ):ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ ಹಳ್ಳದಲ್ಲಿ ಬಿದ್ದ ಪರಿಣಾಮ ಟ್ರ್ಯಾಕ್ಟರನಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದ ಕುದರೆನಾಳ ಬ್ರೀಡ್ಜ್ ಹತ್ತಿರ ನಡೆದಿದೆ

ಮೃತಪಟ್ಟವನನ್ನು ಪಟ್ಟಣದ ಕಂಬಾರಗಟ್ಟಿಯ ನಿವಾಸಿ ಹಜರತ್‍ಸಾಬ ಕಬ್ಬನೂರ ಎಂದು ಗುರುತಿಸಲಾಗಿದೆ.

ಟ್ರ್ಯಾಕ್ಟರ್ ಚಲಾಯಿಸುತ್ತಿದ್ದವನನ್ನು ಈರಣ್ಣ ಕೆಳಗಿನಮನಿ ಹೇಳಲಾಗಿದೆ ಈತನು ಮುಂಡಗೋಡದಿಂದ ಯಲ್ಲಾಪುರ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಮೈನಳ್ಳಿ ಗ್ರಾಮದ ಕುದುರೆನಾಳ ಬ್ರಿಡ್ಜ್ ಬಳಿ ಹಳ್ಳದಲ್ಲಿ ಬಿದ್ದಿದೆ.

ಸಹೋದರನ ಸಾವಿಗೆ ಈರಣ್ಣ ಕೆಳಗಿನಮನಿಯೇ ಕಾರಣ ಎಂದು ಮೃತನ ಸಹೋದರ ನಜೀರ ಕಬ್ಬನೂರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

Comments