UK Suddi
The news is by your side.

ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾಗಿ ದಶರಥ.

ದಾಂಡೇಲಿ:ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಾಮಾಜಿಕ ಜಾಲತಾಣದ ಸಹ ಸಂಚಲಾಕರಾಗಿ ದಾಂಡೇಲಿಯ ಯುವ ನಗರ ಸಭಾ ಸದಸ್ಯ ದಶರಥ ಬಂಡಿವಡ್ಡರ ಅವರು ಆಯ್ಕೆಯಾಗಿದ್ದಾರೆ.

ಜೊತೆಗೆ ಬಿಜೆಪಿ ಕೈಗೊಳ್ಳಲಿರುವ ಆನ್‍ಲೈನ್ ಸ್ಪರ್ಧೆಯ ಜಿಲ್ಲಾ ಮುಖ್ಯಸ್ಥರನ್ನಾಗಿಯೂ ದಶರಥ ಬಂಡಿವಡ್ಡರ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೆ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿ, ಯುವ ಮೋರ್ಚಾ ದಾಂಡೇಲಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸಕ್ತ ಬಿಜೆಪಿಯ ದಾಂಡೇಲಿ ಘಟಕದ ಎಸ್.ಸಿ ಮೋರ್ಚಾದ ಅಧ್ಯಕ್ಷರಾಗಿರುವ ದಶರಥ ಬಂಡಿವಡ್ಡರ ಅವರು ನಗರ ಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.

Comments