UK Suddi
The news is by your side.

ಶಿವಮೊಗ್ಗ ಟೌನ್-ಯಶವಂತಪುರ ಜಂ ರೈಲ್ವೇಗೆ ಚಾಲನೆ.

ಶಿವಮೊಗ್ಗ:ಶಿವಮೊಗ್ಗ ಜನತೆಯ ಬಹು ನಿರೀಕ್ಷಿತ ಸೂಪರ್ ಫಾಸ್ಟ್ ಜನಶತಾಬ್ದಿ ರೈಲಿಗೆ ಸಂಸದ ಬಿ ವೈ ರಾಘವೇಂದ್ರ ಅವರು ರವಿವಾರ ಚಾಲನೆ ನೀಡಿದರು.

ಶಿವಮೊಗ್ಗ -ಯಶವಂತಪುರ ಮಧ್ಯೆ ಸಂಚರಿಸುವ ಜನ ಶತಾಬ್ದಿ ರೈಲಿಗೆ ರವಿವಾರ ಸಂಜೆ ಸಂಸದ ಬಿ ವೈ ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಸಂಸದ ಬಿವೈ ರಾಘವೇಂದ್ರ ಹಾಗೂ ವಿಪಕ್ಷ ನಾಯಕ ಯಡಿಯೂರಪ್ಪ ಸೇರಿದಂತೆ ಹಲವರು ರೈಲಿನಲ್ಲಿ ಭದ್ರಾವತಿವರೆಗೆ ಸಂಚರಿಸಿದರು.

ಅಯನೂರು ಮಂಜುನಾಥ,ರೈಲ್ವೆ ಅಧಿಕಾರಿಗಳು ಹಾಗೂ ಗಣ್ಯರ ಉಪಸ್ಥಿತರಿದ್ದರು.

Comments