UK Suddi
The news is by your side.

ಅಳಿವಿನಂಚಿನಲ್ಲಿರುವ ಯಕ್ಷಗಾನ ಕಲೆಯನ್ನು ಉಳಿಸಬೇಕಾಗಿದೆ:ಶಾಸಕ ದಿನಕರ್ ಶೆಟ್ಟಿ.

ಕಾಗಲ(ಕುಮಟಾ):ಶ್ರೀ ಶಕ್ತಿ ವೀರ ಮಾರುತಿ ಚಿಣ್ಣರ ಯಕ್ಷಗಾನ ಮಂಡಳಿ ಕಾಗಲ್ ಇವರ ಆಶ್ರಯದಲ್ಲಿ ರೈತರ ಸಹಕಾರಿ ಸೇವಾ ಸಂಘದ ಆವರಣ ದಲ್ಲಿ ನಡೆದ ಚಿಣ್ಣರ ಯಕ್ಷಕಲಾ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಕುಮಟಾ ಹೊನ್ನಾವರ ಶಾಸಕರಾದ ದಿನಕರ್ ಶೆಟ್ಟಿ ಅವರು ದೀಪ ಬೆಳಗುವ ಮೂಲಕ ಉಧ್ಘಾಟಿಸಿದರು.

ನಂತರ ಮಾತನಾಡಿದ ಅವರು ಯಕ್ಷಗಾನವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ.ಅಳಿವಿನಂಚಿನಲ್ಲಿರುವ ಈ ಕಲೆಯನ್ನು ನಾವು ಉಳಿಸಬೇಕಾಗಿದೆ.ಯಕ್ಷಗಾನ ಒಂದು ಸಂಪೂರ್ಣ ಕಲೆ,ಅದರಲ್ಲಿ ಸಂಗೀತ , ಸಾಹಿತ್ಯ, ನೃತ್ಯ, ಎಲ್ಲವೂ ಮೇಳೈಸಿದೆ.ಶುದ್ಧವಾದ ಕನ್ನಡವನ್ನು ಬಳಸುವ ಏಕೈಕ ಕಲೆ ಯಕ್ಷಗಾನ. ಅದನ್ನು ಉಳಿಸಿ ಬೆಳಿಸ ಬೇಕಾಗಿದೆ ಎಂದರು.

ಕಾಗಲನಲ್ಲಿ ಚಿಣ್ಣರ ಯಕ್ಷಗಾನ ಮಂಡಳಿ ಸ್ಥಾಪಿಸಿ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಶ್ರೀ ಮಾರುತಿ ನಾಯ್ಕ ಹಾಗೂ ಮಂಜುನಾಥ್ ನಾಯ್ಕ ರವರಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಭಾಸ್ಕರ್ ಪಟಗಾರ,ಕಾಗಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿ ಪಂಡಿತ್, ಸ್ಥಾಯಿ ಸಮಿತಿ ತಾಪಂ ಅಧ್ಯಕ್ಷರಾದ ಜಗನ್ನಾಥ್ ನಾಯ್ಕ,ರವಿಖಾಂತ್ ಎಸ್ ನಾಯ್ಕ, ಶ್ರೀಮತಿ ಚಂದ್ರಕಲಾ ನಾಯ್ಕ, ಪ್ರಭಾಕರ್ ನಾಯ್ಕ,ಮಾರುತಿ ನಾಯ್ಕ, ಹಾಗೂ ಇನ್ನಿತರರೂ ಉಪಸ್ಥಿತರಿದ್ದರು