UK Suddi
The news is by your side.

ಕೆರಿಮತ್ತಿಹಳ್ಳಿಯ ಕವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಖಾದಿ ಸಮವಸ್ತ್ರ ಜಾರಿ.

ಹಾವೇರಿ:ಕರ್ನಾಟಕ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಕೆರಿಮತ್ತಿಹಳ್ಳಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೈಮಗ್ಗ ಹಾಗೂ ಗುಡಿ ಕೈಗಾರಿಕೆ ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಹಾಗೂ ಮಹಾತ್ಮಾ ಗಾಂಧಿಯವರ 150ನೇ ಜಯಂತ್ಯೋತ್ಸವದ ಅಂಗವಾಗಿ ಖಾದಿ ಸಮವಸ್ತ್ರ ಜಾರಿತಂದಿದ್ದಾರೆ.

ಪ್ರತಿ ಬುಧವಾರ ಮತ್ತು ಶುಕ್ರವಾರ ಖಾದಿ ಜುಬ್ಬಾ ಹಾಗೂ ನೀಲಿ ಜಿನ್ಸ್ ಪ್ಯಾಂಟ್ ಹಾಕುವ ಮೂಲಕ ಯುವ ಪತ್ರಕರ್ತರು ಹೊಸ ದಿಕ್ಕಿನತ್ತ ವಾಲುತ್ತಿದ್ದಾರೆ.ಕವಿವಿ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ವಿಭಾಗಕ್ಕೆ ಪ್ರೋತ್ಸಾಹದ ಅವಶ್ಯಕತೆಯಿದೆ.ಸಮವಸ್ತ್ರವನ್ನು ಡಾ.ವಿಶ್ವನಾಥ ಚಿಂತಾಮಣಿ ಅವರು ಜಾರಿ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Comments