UK Suddi
The news is by your side.

ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಕೈ ಮೇಲು-ನೀಲಪ್ಪ ತುಂಬದ.

ಹುನಗುಂದ(ಬಾಗಲಕೋಟೆ):ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಮುಖ್ಯ.ಕಷ್ಟದಲ್ಲಿ ಇರುವ ವ್ಯಕ್ತಿಗಳಿಗೆ ಪ್ರತಿಯೊಬ್ಬರು ಸಹಾಯ ಸಹಕಾರ ಮಾಡುವುದು ಅಷ್ಟೇ ಮುಖ್ಯ ಎಂದು ಕೆಲೂರ ಗ್ರಾಮದ ನೀಲಪ್ಪ ತುಂಬದ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಮಗನಾದ ಸ್ನೇಥಿಕ್‍ನ 3 ನೆಯ ವರ್ಷದ ಹುಟ್ಟು ಹಬ್ಬದಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಮಾತನಾಡಿದ ಅವರು ಜೀವನದಲ್ಲಿ ಪ್ರತಿಯೊಬ್ಬರು ಕಷ್ಟ ಸುಖವನ್ನು ಸಮನಾಗಿ ಸ್ವೀಕರಿಸಬೇಕು.ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಕೈ ಮೇಲು.ಸ್ನೇಥಿಕ್‍ನ 3 ನೆಯ ವರ್ಷದ ಹುಟ್ಟು ಹಬ್ಬವನ್ನು ಕಷ್ಟದಲ್ಲಿರುವ ರೋಗಿಗಳ ಜೊತೆಗೆ ಆಚರಿಸಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ವೈಧ್ಯಾಧಿಕಾರಿ ಡಾ.ಕುಸುಮಾ ಮಾಗಿ,ವೈಧ್ಯ ಡಾ.ಪ್ರಶಾಂತ ತುಂಬಗಿ,ಶಿಕ್ಷಕ ವಿಜಯ ಗದ್ದನಕೇರಿ,ಗ್ರಾಮದ ಮುಖಂಡರಾದ ಯಲ್ಲಪ್ಪ ಆಸಂಗಿ,ಸಂತಾನಪ್ಪ ಅಚನೂರ,ಮೈಲಾರಪ್ಪ,ಮುದಿಯಪ್ಪ ಗೋತಗಿ ಸೇರಿದಂತೆ ಅನೇಕರು ಇದ್ದರು.

Comments