UK Suddi
The news is by your side.

ಮನುಷ್ಯ ತನ್ನ ಜೀವನ ಪರ್ಯಂತ ಬದುಕಲು ಮಾಡುವ ಎಲ್ಲಾ ಕಾರ್ಯಗಳು ನಾಟಕವಾಗಿದೆ:ಪ್ರೊ. ಯು.ಅಬ್ದುಲ್ ಮುತಾಲಿಬ್

ಮೂರು ದಿನಗಳ ನಾಟಕ ಪ್ರಯೋಗ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಬ್ದುಲ್ ಮುತಾಲಿಬ್ ಮಾತನಾಡಿದರು.
ಬಳ್ಳಾರಿ:ರಂಗಭೂಮಿ ನಿಂತ ನೀರಲ್ಲ
ನಾಟಕವೆಂದರೆ ಕೇವಲ ಹಾಡುವುದು,ಗದೆ ಹಿಡಿದು ಕುಣಿಯುವುದು ಮಾತ್ರ ನಾಟಕವಲ್ಲ, ಮನುಷ್ಯ ತನ್ನ ಜೀವನ ಪರ್ಯಂತ ಬದುಕಲು ಮಾಡುವ ಎಲ್ಲಾ ಕಾರ್ಯಗಳು ನಾಟಕವಾಗಿದೆ ಎಂದು ಸ.ಸ.ಅ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಯು.ಅಬ್ದುಲ್ ಮುತಾಲಿಬ್ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ನಾಟಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ “ಮೂರು ದಿನಗಳ ನಾಟಕ ಪ್ರಯೋಗ ಕಾರ್ಯಕ್ರಮ’’ ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ವಿಭಾಗದಿಂದ ಜೀವನ ಶೈಲಿ ರೂಪಿಸಿಕೊಳ್ಳಬೇಕು. ನಾಟಕವೆಂಬುದು ಸುಲಭವಲ್ಲ, ಕಠಿಣ ಶ್ರಮವಿರಬೇಕು. ರಂಗಭೂಮಿಯು ನಿಂತ ನೀರಲ್ಲ, ಹರಿಯುವ ನೀರಿನಂತೆ ಸಾಗರವನ್ನು ಸೇರುವವರೆಗೆ ಸಾಧನೆಯ ಛಲ, ಶ್ರಮವನ್ನು ಬಿಡಬಾರದು ಎಂದು ಕಿವಿಮಾತು ಹೇಳಿದರು.

ನಾಟಕ ವಿಭಾಗದ ಮುಖ್ಯಸ್ಥರಾದ ಸಿ. ದೇವಣ್ಣ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ದಿನ ನಿತ್ಯದ ಮಾನವ ಮಾಡುವ ಎಲ್ಲ ನಟನೆಗಳನ್ನು ಕಲಾವಿದರೂ ಅಭಿನಯದ ಮೂಲಕ ಪ್ರದರ್ಶಿಸುತ್ತಾರೆ. ರಂಗಭೂಮಿಯಲ್ಲಿ ಕಲಾವಿದರು ಯಾವ ರೀತಿ ಮಹತ್ವವನ್ನು ಪಡೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ನಾಟಕ ವಿಭಾಗ ಹಾಗೂ ರಂಗಭೂಮಿ ಮಹತ್ವವನ್ನು ತಿಳಿಸುವ ಮೂಲಕ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿನ ಕಲಾವಿದರು ಯಾವ ರೀತಿ ತಮ್ಮ ಕೀರ್ತಿಯನ್ನು ಬಿಂಬಿಸಿಕೊಂಡಿದ್ದಾರೆಂಬುದನ್ನು ತಿಳಿಸಿದರು.

ಊರುಭಂಗ ನಾಟಕ ಪ್ರದರ್ಶನ: ನಾಟಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ನಾಟಕ ಪ್ರಯೋಗ ಪ್ರದರ್ಶನ ಸತತವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು, ಮೊದಲನೆಯ ದಿನ ಊರುಭಂಗ ನಾಟಕವನ್ನು 30 ನಿಮಿಷಗಳ ಕಾಲ ಪ್ರದರ್ಶಿಸಿದರು. ಈ ನಾಟಕವು ಮಹಾಭಾರತದ ಕುರುಕ್ಷೇತ್ರದಲ್ಲಿ ಕೊನೆಯ ಭಾಗದ ಭೀಮನು ಕೌರವರ 100 ಜನರನ್ನು ಸಂಹರಿಸಿ ತನ್ನ ಗದೆಯಿಂದ ದುರ್ಯೋಧನನ ತೊಡೆಯನ್ನು ಮುರಿದಾಗ ದುರ್ಯೋಧನ ತನ್ನ ಅಳಲನ್ನು ತನ್ನ ತಂದೆತಾಯಿ, ಬಲರಾಮ ಅಶ್ವತಾಮ, ಮರ್ಜಯ ರ ಬಳಿ ತೋಡಿಕೊಳ್ಳುವ ಅಳಲನ್ನು ವಿವರಿಸುವ ಘಟನೆಯಾಗಿದೆ. ಈ ನಾಟಕವನ್ನು ವಿದ್ಯಾರ್ಥಿಗಳು ಬಹಳ ಅದ್ಭುತವಾಗಿ ಪ್ರದರ್ಶಿಸಿದರು.
ಈ ನಾಟಕವು ಅಣ್ಣಾಜಿಕೃಷ್ಣಾರೆಡ್ಡಿ, ಅಂಬರೀಷ್ ಸಾರಂಗಿಯವರ ನೇತೃತ್ವದಲ್ಲಿ ನಡೆಯಿತು. ರಚನೆ- ರಾಮಚಂದ್ರ , ನಿರ್ದೇಶನ–ಚೆನ್ನ ಕೇಶವ ರೆಡ್ಡಿ, ಮೇಕಪ್- ವೆಂಕಟೇಶ ಬೆಂಗಳೂರು. ಪಾತ್ರದಾರಿಗಳು: ದುರ್ಯೋಧನ- ವೈ ಚೆನ್ನಕೇಶವರೆಡ್ಡಿ, ಬಲರಾಮ- ಅಶೋಕ, ದೃತರಾಷ್ಟ್ರ- ಜಹೀರ್‍ಗುತ್ತಿ, ಗಾಂದಾರಿ- ಅನಿತ, ಮೇಳÀ- ವಿಜಯಲಕ್ಷ್ಮಿ, ಮೀರಾಭಾಯಿ, ಸೂತ್ರಧಾರ- ಅನುಮೇಶ, ನಟ- ಕೆ.ಬಸವರಾಜ, ಅಶ್ವತಾಮ- ರವಿಕಿರಣ, ಮರ್ಜಯ- ಜಿ. ರಾಜಶೇಖರ.
ಕಾರ್ಯಕ್ರಮದಲ್ಲಿ ರಂಗಕಲಾವಿದ ಯಲ್ಲನಗೌಡ ಶಂಕರಬಂಡೆ, ಸಮಾಜಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಮಖಂದರ್, ನಾಟಕ ವಿಭಾಗದ ಉಪನ್ಯಾಸಕ ಅಣ್ಣಾಜಿಕೃಷ್ಣಾರೆಡ್ಡಿ ಮತ್ತು ಡಾ.ಆರ್.ಜೆ. ಅಂಬರೀಷ್, ಕಲಾವತಿ ಇದ್ದರು.

Comments