UK Suddi
The news is by your side.

ವಿಟಿಯು ಅಷ್ಟೇ ಏಕೆ, ರಾಜ್ಯವನ್ನೆ ವಿಭಜನೆ ಮಾಡಿ: ಹೋರಾಟಗಾರ ಆಕ್ರೋಶ.

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಮಾಡುವ ಹುನ್ನಾರ ಕೈ ಬಿಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಮಂಗಳವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಮುಖ್ಯಮಂತ್ರಿಗಳು ಬಜೆಟ್ ಅಂಶದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಮಾಡುತ್ತಿರುವದನ್ನು ಅಡಕ ಮಾಡಿದ್ದು, ಉತ್ತರ ಕರ್ನಾಟಕ ಜನತೆಗೆ ಮತ್ತೆ ಅನ್ಯಾಯ ಮಾಡುತ್ತಿದೆ. ಉ.ಕ. ಕಚೇರಿಗಳನ್ನು ಸ್ಥಳಾಂತರ ಮಾಡುವುದು, ವಿಶ್ವವಿದ್ಯಾಲಯವನ್ನು ವಿಭಜನೆ ಮಾಡುವುದು ನಿರಂತರ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎನ್ನುವುದಕ್ಕೆ ಮತ್ತೇನು ಬೇಕು ಎಂದಿದ್ದಾರೆ.

ತತಕ್ಷಣ ವಿಶ್ವವಿದ್ಯಾಲಯ ವಿಭಜನೆ ಕೈ ಬಿಡಬೇಕು ಇಲ್ಲವೆ, ಇಲ್ಲವೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡುವ ಮೂಲಕ ಕಚೇರಿ ಸ್ಥಳಾಂತರ ಮಾಡಿ ಎಂದು ಒತ್ತಾಯಿಸಿದ್ದಾರೆ. ಜಿಲ್ಲಾಧ್ಯಕ್ಷ ಅಡವೇಶ ಇಟಗಿ, ಶ್ರೀಕಾಂತ ಮಾದುಭರಮನ್ನವರ, ಲಕ್ಷ್ಮಣ ಮಾದರ ಇತರರು ಉಪಸ್ಥಿತರಿದ್ದರು.

Comments