UK Suddi
The news is by your side.

ಶಾಸಕರ ಪತ್ತೆ ಹಚ್ಚಲು ಮುಂಬೈಗೆ ತೆರಳಿದ ಕರ್ನಾಟಕ ಪೊಲೀಸ್.

ಬೆಂಗಳೂರು:ಕೆಲವು ದಿನಗಳಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ಕು ಬಂಡಾಯ ಶಾಸಕರನ್ನ ಹುಡುಕಲು ರಾಜ್ಯದ 40 ಜನರ ಪೊಲೀಸ್ ತಂಡ ಸೋಮವಾರದಂದು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ಅತೃಪ್ತ ಶಾಸಕರ ಪತ್ತೆಗಾಗಿ ಕ್ಷೇತ್ರದ ಜನರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.ಶಾಸಕರು ಕ್ಷೇತ್ರಕ್ಕೆ ಬರುತ್ತಿಲ್ಲ.ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಪತ್ರದ ಮೂಲಕ ಸ್ಪೀಕರ್ ಅವರಿಗೆ ಒತ್ತಾಯಿಸಿದ್ದರು.

ಮನವಿ ಸ್ವೀಕರಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಗೃಹ ಇಲಾಖೆಗೆ ಪ್ರಕರಣ ವರ್ಗಾವಯಿಸಿದ್ದು, ಶಾಸಕರ ಪತ್ತೆ ಮಾಡುವಂತೆ ತಿಳಿಸಿದ್ದಾರಂತೆ.

ಅದರಂತೆಯೇ ಶಾಸಕರನ್ನು ಹುಡುಕಲು ರಾಜ್ಯ ಗೃಹ ಇಲಾಖೆಯು 40 ಜನರ ಪೊಲೀಸ್ ತಂಡವನ್ನು ಮುಂಬೈಗೆ ರವಾನಿಸಿದೆ.

Comments