UK Suddi
The news is by your side.

ಹುನಗುಂದ ಪ್ರಾಥಮಿಕ ಸಹಕಾರಿ ಕೃಷಿ ಬ್ಯಾಂಕ್ ಅಧ್ಯಕ್ಷರಾಗಿ ಮಲ್ಲನಗೌಡ ಗೌಡರ ಆಯ್ಕೆ.

ಹುನಗುಂದ(ಬಾಗಲಕೋಟೆ):ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ನಿಯಮಿತ ಹುನಗುಂದ ಕಾಂಗ್ರೆಸ್‍ನ ನೂತನ ಅದ್ಯಕ್ಷರಾಗಿ ಮಲ್ಲನಗೌಡ ಶಿ ಗೌಡರ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರು ಶಂಭು ಗೂಳಪ್ಪ ಹುಲಿಗುಡ್ಡ ಬಿಜೆಪಿಯಿಂದ 7 ಮತಗಳು ಹಾಗೂ ಕಾಂಗ್ರೆಸ್ 8 ಮತಗಳಿಂದ ಉಪಾದ್ಯಕ್ಷರಾಗಿ ಕಾಂಗ್ರೆಸ್ ನ ಪ್ರಭು ಗೌಡರ ಆಯ್ಕೆಯಾಗಿದ್ದಾರೆ,ಎಂದು ಚುನಾವಣೆ ಅಧಿಕಾರಿಯಾಗಿ ಸುಭಾಸ ಸಂಪಗಾವಿ ಘೋಷಿಸಿದ್ದಾರೆ.

ಚುಣಾವಣೆಯ ಬಳಿಕ ಮಾತನಾಡಿದ ನೂತನ ಅಧ್ಯಕ್ಷರಾದ ಮಲ್ಲನಗೌಡ ಗೌಡರ ರೈತರ ಯಾವುದೇ ಕೆಲಸ ಕಾರ್ಯಗಳನ್ನು ನಮ್ಮ ಪ್ರಾಥಮಿಕ ಸಹಕಾರಿ ಬ್ಯಾಂಕಿನ ಸೌಲಭ್ಯಗಳನ್ನು ರೈತರಿಗೆ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಅದ್ಯಕ್ಷರಾದ ಮಹಾಂತೇಶ ಕಡಿವಾಲ ತಾ,ಪಂ ಸದಸ್ಯರಾದ ಅಮೀನಪ್ಪ ಸಂದಿಗವಾಡ ಶಂಕ್ರಣ್ಣ ನೇಗಲಿ, ಅನ್ನದಾನೇಶ್ವರ ನಾಡಗೌಡ್ರ ಬಸು ಗೌಡರ. ನೂತನ ಸದಸ್ಯರಾದ ರತ್ನಾ ಸಂ ಚಿನಿವಾಲರ ಬಸವರಾಜ ನಿಡಗುಂದಿ, ನಿಂಗನಗೌಡ ಗೌಡರ. ಲೀಲಾವತಿ ಪಾಟೀಲ. ಥಾವರಪ್ಪ ಲಮಾಣಿ ಮಹಾಂತೇಶ ಪಾಟೀಲ, ಪರತಗೌಡ ಪಾಟೀಲ. ಮಂಗಳಪ್ಪ ಬಳಬಟ್ಟಿ. ಶೇಖರಪ್ಪ ಬಾದವಾಡಗಿ ಮಾನನಗೌಡ ಪಾಟೀಲ ಇದ್ದರು.

Comments