UK Suddi
The news is by your side.

ಎರಡು ಕಾರು ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ.

ಸಕಲೇಶಪುರ: ತಾಲ್ಲೂಕಿನ ಕುಂಬಾರಗಟ್ಟೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಅಪಘಾತ. ಒಂದು ಕಾರನ್ನು ಹಿಂದಿಕ್ಕಿಯುವ ಆತುರದಲ್ಲಿ ಮತ್ತೊಂದು ಕಾರು ಬಲ ಭಾಗದಲ್ಲಿ ಚಲಿಸಿದ್ದರಿಂದ ಎದುರಿಂದ ಬಂದ ಲಾರಿ ಅಪಘಾತ ತಪ್ಪಿಸಲು ಹೋಗಿ ಈ ಅಪಘಾತ ನೆಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದಿಂದ ಆಲ್ಟೊ ಕಾರಿನ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಉಳಿದಂತೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Comments