UK Suddi
The news is by your side.

ಪೊಲೀಸ್ ಅಧಿಕಾರಿ ವಾಹನ ಡಿಕ್ಕಿ ಯುವಕನಿಗೆ ಗಾಯ.

ಬೆಳಗಾವಿ: ಎಪಿಎಂಸಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರ ವಾಹನ ಡಿಕ್ಕಿ ಹೊಡೆದು ಯುವಕನೋರ್ವ ಗಾಯಗೊಂಡಿದ್ದು, ತಾಯಿಯ ಗೋಳು ಮುಗಿಲು ಮುಟ್ಟಿತ್ತು.

ಲಕ್ಷಣ ಎಂಬಾತನ ಕಾಲು ಮುರಿದಿದ್ದು, ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಲಾಯಿತು. ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದ್ದ ಬಗ್ಗೆ ಡಾಕ್ಟರ್ ಹೇಳಿಕೆ ಉಲ್ಲೇಖಿಸಿ ಆತನ ತಾಯಿ ಮತ್ತು ಸಂಬಂಧಿಕರು ಆರ್ಥಿಕ ಸಮಸ್ಯೆ ಮತ್ತು ಜೀವನದ ತೊಂದರೆ ಪ್ರಸ್ತುತ ಪಡಿಸಿ ದುಃಖಿತರಾದರು. ಪೊಲೀಸ್ ಇಲಾಖೆ ಹೆಚ್ಚಿನ ಮಾಹಿತಿ ಹೊರಗೆಡವಬೇಕಿದೆ.

Comments