UK Suddi
The news is by your side.

ಫೆ.16ರಂದು ಹುಬ್ಬಳ್ಳಿಯಲ್ಲಿ ಬೃಹತ ಉದ್ಯೋಗ ಮೇಳ.

ಧಾರವಾಡ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ, ಕರ್ನಾಟಕ ವಾಣಿಜ್ಯೊದ್ಯಮ ಸಂಸ್ಥೆ, ಹುಬ್ಬಳ್ಳಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಧಾರವಾಡ ಹಾಗೂ ಹಿಮತ್‌ಸಿಂಗ್ ಕಾ ಸಿಡೆ, ಹಾಸನ ಘಟಕದ ಸಹಯೋಗದಲ್ಲಿ ಫೆಬ್ರವರಿ 16 ರಂದು ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ಭವನ, ನ್ಯೂ ಕಾಟನ್ ಮಾರ್ಕೆಟ, ಹುಬ್ಬಳ್ಳಿಯಲ್ಲಿ ಸಿದ್ದ ಉಡುಪು ತಯಾರಿಕಾ ಮಹಿಳಾ ಕೆಲಸಗಾರರಿಗೆ ಹಾಸನ ಘಟಕದಲ್ಲಿ ಉದ್ಯೊಗಾವಕಾಶ ಕಲ್ಪಿಸಲು “ಉದ್ಯೊಗ ಮೇಳ”ವನ್ನು ಆಯೋಜಿಸಲಾಗಿದೆ.

ಒಟ್ಟು 800 ಮಹಿಳೆಯರಿಗೆ ಉದ್ಯೊಗಾವಕಾಶ ಕಲ್ಪಿಸಲು ಉದ್ದೆಶಿಸಿದ್ದು, ಮಹಿಳೆಯರುರಿಂದ 25 ವರ್ಷ ವಯೋಮಿತಿಯವರು ಮತ್ತು ಕನಿಷ್ಠ ಎತ್ತರ 260 ಸೆಂಟಿ ಮೀಟರ್ ಹಾಗೂ ೮ನೇ ತರಗತಿ ಉತ್ತಿರ್ಣರಾಗಿರಬೇಕು. ಕಂಪನಿ ವತಿಯಿಂದ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗುವುದು. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಆಸಕ್ತ ಮಹಿಳೆಯರು ತಮ್ಮ ಆಧಾರ ಕಾರ್ಡ, ರೇಶನ್ ಕಾರ್ಡ, ಚುನಾವಣೆ ಗುರುತಿನ ಚೀಟಿ ಮತ್ತು ವಿದ್ಯಾರ್ಹತೆಯ ದಾಖಲೆಗಳನ್ನು ತರಬೇಕು. ನಿರುದ್ಯೊÃಗ ಮಹಿಳೆಯರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬಹುದು

ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೆಶಕಿ ಕು.ಸುಧಾ ಪವಾರ, ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments