UK Suddi
The news is by your side.

ಫೆ.20ರಂದು ರಂದು ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುದ್ದೆಗೆ ಚುನಾವಣೆ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಯು ಅವಿಶ್ವಾಸ ಗೊತ್ತುವಳಿ ನಿರ್ಣಯದಿಂದ ತೆರವಾಗಿರುವ ಪ್ರಯುಕ್ತ 5 ವರ್ಷಗಳ ಉಳಿದ ಅವಧಿಗೆ ಚುನಾವಣೆ

ಜರುಗಿಸಲು ಚುನಾವಣೆ ಸಭೆಯ್ನನು ಫೆಬ್ರವರಿ 20, 2019 ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಗೃಹದಲ್ಲಿ ಜರುಗಿಸಲಾಗುವುದು.

ಸರ್ಕಾರದ ಅಧಿಸೂಚನೆಯಂತೆ ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನವನ್ನು ಸಾಮಾನ್ಯ (ಮಹಿಳಾ) ವರ್ಗಕ್ಕೆ ಮೀಸಲಿಡಲಾಗಿದೆ. ಅಧ್ಯಕ್ಷರ ಹುದ್ದೆಯ ಚುನಾವಣೆ ಸಭೆಗೆ ಗೊತ್ತುಪಡಿಸಿದ ಅವಧಿಯ ಎರಡು ಗಂಟೆಗಳಿಗಿಂತ ಕಡಿಮೆ ಇಲ್ಲದಂತೆ (ಫೆಬ್ರವರಿ 20, 2019ರಂದು ಬೆಳಿಗ್ಗೆ 11 ಗಂಟೆಯವರೆಗೆ) ಮುಂಚಿತವಾಗಿ ಯಾರೇ ಸದಸ್ಯರು, ನಮೂನೆ-೧ ರಲ್ಲಿ ನಾಮನಿರ್ದೆÃಶನ ಪತ್ರವನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಅಧಿಕೃತಗೊಳಿಸಲಾದ ಅಧಿಕಾರಿಯಾದ ಧಾರವಾಡ ಅಪರ ಜಿಲ್ಲಾಧಿಕಾರಿಗಳು ಇವರಿಗೆ ಧಾರವಾಡ ಜಿಲ್ಲಾ ಪಂಚಾಯತ್ ಸಭಾಗೃಹದಲ್ಲಿ ಸಲ್ಲಿಸಬಹುದೆಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗಳ ಅಧ್ಯಕ್ಷಾಧಿಕಾರಿಗಳಾದ ಪಿ.ಎ. ಮೇಘಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-Dharwad VB

Comments