UK Suddi
The news is by your side.

ರಮೇಶ ಜಾರಕಿಹೊಳಿಗೆ ನಗರಾಭಿವೃದ್ಧಿ ಸಚಿವ ಸ್ಥಾನದ ಭರವಸೆ..??

ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಬಂಡಾಯ ಬಿಟ್ಟು ಮರಳಿ ಬಂದ್ರೆ ಸಚಿವ ಸ್ಥಾನ ಮತ್ತು ಅನರ್ಹ ಮರು ಪರಿಶೀಲನೆ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಧಾನಕ್ಕಾಗಿ ಶಾಸಕ ಸಹೋದರ ಬಾಲಚಂದ್ರ ಜಾರಕಿಹೊಳಿ ಮೂಲಕ ರಮೇಶ ಜಾರಕಿಹೊಳಿ ಕೆ.ಸಿ. ವೇಣುಗೋಪಾಲ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ.

ಅನಗತ್ಯ ಬಂಡಾಯ ಬೇಡ ಎಂದು ರಮೇಶ ಜಾರಕಿಹೊಳಿಗೆ ವೇಣುಗೋಪಾಲ ಸಲಹೆ ನೀಡಿದ್ದು ವಾಪಸ್ ಬಂದರೆ ಈಗ ಯು.ಟಿ. ಖಾದರ ಬಳಿ ಇರುವ ನಗರಾಭಿವೃದ್ಧಿ ಸಚಿವ ಸ್ಥಾನ ಮತ್ತು ನಿಮಗೆ ಬೇಕಾದ ಜಿಲ್ಲಾ ಉಸ್ತುವಾರಿಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೆ ರಮೇಶ ಜಾರಕಿಹೊಳಿ ಸೇರಿ 4 ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಗೆ ಕಾಂಗ್ರೆಸ್ ನಾಯಕರು ದೂರು ನೀಡಿದ್ದರು.