UK Suddi
The news is by your side.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಧಾನಿಮಂತ್ರಿಗಳಿಗೆ ನ್ಯಾಯವಾದಿಗಳ ಒತ್ತಾಯ.

ಮುಂಡಗೋಡ:ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೋರ್ಟ್ ಕಲಾಪದಿಂದ ಹೊರಗುಳಿದ ನ್ಯಾಯವಾದಿಗಳು ಮಂಗಳವಾರ ಪ್ರಧಾನ ಮಂತ್ರಿಗಳಿಗೆ ತಹಶೀಲ್ದಾರ ಮುಖಾಂತರ ಮನವಿ ಅರ್ಪಿಸಿದರು
ಮನವಿಯಲ್ಲಿ ಬಾರ ಕೌನ್ಸಿಲ್ ಆಫ್ ಇಂಡಿಯಾ ದ ಚೇರಮನ್ ರಾದ ಮನನ್ ಕುಮಾರ ಮಿಶ್ರಾ ರವರು ವಕೀಲರ ಅಭ್ಯುದಯಕ್ಕಾಗಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ ಅವರ ಬೇಡಿಕೆಗಳು ನಮ್ಮ ಬೇಡಿಕೆಗಳಾಗಿವೆ, ಶೀಘ್ರದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ನಮ್ಮ ಬೇಡಿಕೆಗಳಾದ ವಕೀಲರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ವಿಮೆ ಸೌಕರ್ಯ, ವಕೀಲರ ಸಂಘಕ್ಕೆ ಸರಿಯಾದ ಕಟ್ಟಡ ಸಭಾ ಗೃಹ ಗಣಕೀಕೃತ ವ್ಯವಸ್ತೆಯ ವಾಚನಾಲಯ, ಮಹಿಳಾ ವಕೀಲರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ವಕೀಲ ವೃತ್ತಿ ಮಾಡ ಬಯಸಲೆಂದು ಬರುವ ಹೊಸ ವಕೀಲರಿಗೆ 5 ವರ್ಷ ವಕೀಲಿ ವೃತ್ತಿ ಕೈಗೊಳ್ಳುವವರೆಗೆ ಪ್ರತಿ ತಿಂಗಳಂತೆ ಹತ್ತು ಸಾವಿರ ರೂ ನೀಡುವುದು ವಕೀಲ ವೃತ್ತಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೃತ ಪಟ್ಟರೆ ಅಥವಾ ಅನಾರೋಗ್ಯದಿಂದ ವೃತ್ತಿ ಮುಂದುವರಿಸಲಾಗದ ವಕೀಲರಿಗೆ ಹಾಗೂ ಅವರ ಅವಲಂಬಿತರಿಗೆ ಧನಸಹಾಯ ಒದಗಿಸಿಕೊಡುವುದು ಮತ್ತು ಅವಶ್ಯವುಳ್ಳ ಬದಲಾವಣೆ ಮಾಡುವುದು ಸೇರಿದಂತೆ ಹಾಗೂ ವಕೀಲರ ಗೃಹ ನಿರ್ಮಾಕ್ಕೆ ಕಡಿಮೆ ದರದಲ್ಲಿ ಭೂಮಿಯನ್ನು ಒದಗಿಸುವುದು ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ.

ನ್ಯಾಯವಾದಿಗಳಾದ ಮಹ್ಮದಸಲೀಂ ನಂದಿಗಟ್ಟಿ, ಎಸ್.ಪಿ ಸಮ್ಮಸಗಿ, ಸಿ.ಎಸ್ ಗಾಣಿಗೇರ, ಬಸವರಾಜ ಪೂಜಾರ, ಹಿರೇಮಠ, ಸಂಗಮೇಶ ಕೊಳ್ಳಾನವರ ವಿಶ್ವನಾಥ ಪವಾಡಶೆಟ್ಟರ, ರಾಘವೇಂದ್ರ ಮಳಗಿಕರ, ಮುಂತಾದವರು ಉಪಸ್ಥಿತರಿದ್ದರು.
-Shridhar K

Comments