UK Suddi
The news is by your side.

ಉ.ಕ.ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ ಇಂದು.

ಧಾರವಾಡ:ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಭಾರತ ಹವಾಮಾನ ಇಲಾಖೆ,ಭಾರತ ಸರಕಾರ ನವದೆಹಲಿ ಇವರ ವತಿಯಿಂದ “ಉತ್ತರ ಕರ್ನಾಟಕ ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆಯನ್ನು” ಫೆಬ್ರವರಿ 14ರಂದು (ಇಂದು) ಗುರುವಾರ ಮದ್ಯಾಹ್ನ 2 ಗಂಟೆಗೆ ರೈತರ ಜ್ಞಾನಾಭಿವೃದ್ಧಿ ಕೇಂಧ್ರ, ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಇಲಾಖೆಯ ಕೇಂದ್ರ ಸಚಿವ, ಡಾ.ಹರ್ಷವರ್ಧನ್ ಇವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಧಾರವಾಡ ಲೋಕಸಭಾ ಸದಸ್ಯ ಪ್ರಲ್ಹಾದ ಜೋಶಿ, ಭಾರತಿಯ ಭೂವಿಜ್ಞಾನ ಮಂತ್ರಾಲಯದ ಕಾರ್ಯದರ್ಶಿ ಡಾ.ಎಮ್.ಎನ್.ರಾಜೀವನ್, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಯಾದ ಡಾ.ಎಂ.ಬಿ. ಚೆಟ್ಟೆ ಇವರು ಉಪಸ್ಥಿತರಿರುವರು. ಹಾಗೂ ಭಾರತ ಹವಾಮಾನ ಇಲಾಖೆ ಮಹಾ ನಿರ್ದೆಶಕ ಡಾ.ಕೆ.ಜೆ. ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

Comments