UK Suddi
The news is by your side.

ಕೆಳ ಸೇತುವೆ ನಿರ್ಮಿಸಲು ಸಂಸದ ಜೋಶಿ ಮನವಿ.

ನವದೆಹಲಿ/ಹುಬ್ಬಳ್ಳಿ: ಹುಬ್ಬಳ್ಳಿ ವರೂರ ಎಜಿಎಂಆರ್ ಕಾಲೇಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರ ಬಳಿ, ಹಾಗೂ ಪಾಳೆ ಗ್ರಾಮ ಮತ್ತು ಧಾರವಾಡ ಬೆಳಗಾವಿ ರಸ್ತೆಯ ಮಮ್ಮಿಗಟ್ಟಿ ಗ್ರಾಮದಲ್ಲಿ ಹೊಸ ಕೆಳಸೇತುವೆ ನಿರ್ಮಾಣ ಮಾಡುವ ಕುರಿತು ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಬುಧವಾರ ಸಂಸದ ಪ್ರಹ್ಲಾದ್ ಜೋಷಿ ಅವರು ಭೇಟಿಯಾಗಿ ಚರ್ಚೆ ನಡೆಸಿದರು.

ಹುಬ್ಬಳ್ಳಿ ವರೂರ ಎಜಿಎಂಆರ್ ಕಾಲೇಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರ ಬಳಿ, ಹಾಗೂ ಪಾಳೆ ಗ್ರಾಮ ಮತ್ತು ಧಾರವಾಡ ಬೆಳಗಾವಿ ರಸ್ತೆಯ ಮಮ್ಮಿಗಟ್ಟಿ ಗ್ರಾಮದಲ್ಲಿ ಹೊಸ ಕೆಳಸೇತುವೆ ನಿರ್ಮಾಣ ಅಗತ್ಯವಿದ್ದು ಕೊಡಲೇ ಇದರ ಕುರಿತು ಪರಿಶೀಲನೆ ನಡೆಸಿ ಸೇತುವೆಯನ್ನು ನಿರ್ಮಾಣ ಮಾಡಿಸಿಕೊಡಲು ಸಂಸದ ಜೋಶಿ ವಿನಂತಿದರು.
ಈ ಹಿಂದೆ ಈ ಸೇತುವೆ ನಿರ್ಮಾಣ ಕುರಿತು ಸಂಸದ ಜೋಶಿ ಕೋರಿದ್ದರು,ಸಚಿವ ನಿತಿನ್ ಗಡ್ಕರಿ ಅವರು ಡಿಪಿಆರ್ ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು ತನ್ನಿಮಿತ್ತ ಕೂಡಲೇ ಕೆಲಸ ಪ್ರಾರಂಭಿಸಲು ಸಂಸದ ಜೋಶಿ ಒತ್ತಾಯಿಸಿದರು.
ಈ ಸ್ಥಳದಲ್ಲಿ ಅನೇಕ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸುವರಿದ್ದು , ಸಾರ್ವಜನಿಕರಿಗೆ ಬಹಳ ಅನುಕೂಲವಾಗುವ ನಿಟ್ಟಿನಲ್ಲಿ ಕೆಳ ಸೇತುವೆ ನಿರ್ಮಿಸಬೇಕೆಂದು ಮನವರಿಕೆ ಮಾಡಿದರು

ಮನವಿಗೆ ಕೂಡಲೇ ಸ್ಪಂದಿಸಿದ ಸಚಿವರು,ಈ ತಿಂಗಳ ಒಳಗೆ ಕೆಳಸೇತುವೆ ಕಾಮಗಾರಿ ಮಂಜೂರು ಮಾಡುವುದಾಗಿ ಭರವಸೆಯನ್ನು ಕೊಟ್ಟರು ಮತ್ತು ಆದಷ್ಟು ಬೇಗನೆ ಎಂಎಚ್ಎ ಅಧಿಕಾರಿಗಳಿಗೆ ಸ್ಥಳದ ಪರಿಶೀಲನೆ ಮಾಡಿ ವರದಿಯನ್ನು ಕೊಡಲು ಹೇಳುವುದಾಗಿ ಹೇಳಿದರು.