UK Suddi
The news is by your side.

ಜೆಡಿಎಸ್ ಕಾರ್ಯಕರ್ತರ ದಾಳಿ ಖಂಡಿಸಿ ಇಂದು ಹಾಸನ ಬಂದ್.

ಬೆಂಗಳೂರು: ಬಿಜೆಪಿ ಶಾಸಕ ಪ್ರೀತಂ ಗೌಡ ಹಾಸನದ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದ ಸಂದರ್ಭಧಲ್ಲಿ ಪ್ರೀತಂ ಗೌಡ ಬೆಂಬಲಿಗರೊಬ್ಬರಿಗೆ ಗಾಯಗಳಾಗಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಇಂದು ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.

ತಮ್ಮ ಹಾಗೂ ತಮ್ಮ ಕುಟುಂಬವನ್ನು ಮುಗಿಸುವುದಾಗಿ ಕುಮಾರಸ್ವಾಮಿ-ರೇವಣ್ನ ಬೆದರಿಕೆ ಹಾಕಿದ್ದಾರೆಂದು ಪ್ರೀತಂ ಗೌಡ ಹೇಳಿದ್ದು, ರಾಜಕೀಯ ದ್ವೇಷಕ್ಕೆ ಕಾರಣವಾಗಿದೆ.