UK Suddi
The news is by your side.

ಟ್ಯಾಂಕರ್-ಕಾರು ಡಿಕ್ಕಿ: ಮೂರು‌‌ ಸಾವು, ಮೂವರು ಗಂಭೀರ

ಉತ್ತರ ಕನ್ನಡ:ಬುಧವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದ ಘಟ್ಟದಲ್ಲಿ ನಡೆದಿದೆ.

ಅಂಕೋಲಾ ಕಡೆಯಿಂದ ಕಾರವಾರ ಕಡೆ ಹೊರಟ ಕಾರಿಗೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು ಟ್ಯಾಂಕರ್ ಚಾಲಕನ ನಿರ್ಲಕ್ಷ್ಯ ದ ಚಾಲನೆಯಿಂದ ಡಿಕ್ಕಿ ಸಂಭವಿಸಿದ್ದು ಎನ್ನಲಾಗಿದೆ.

ಕಾರು ಓರಿಸ್ಸಾ ನೋಂದಣಿ ಹೊಂದಿದ್ದು ಕಾರಿನಲ್ಲಿ ಇದ್ದವರು ಬೆಂಗಳೂರು ಮೂಲದವರು‌ ಎಂದು ತಿಳಿದು ಬಂದಿದೆ.ಗಾಯಗೊಂಡವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments