UK Suddi
The news is by your side.

ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವಂತೆ ಆಮಂತ್ರಣ.

ರಾಮದುರ್ಗ(ಬೆಳಗಾವಿ):ಬರುವ ಮಾರ್ಚ್ 3 ರಂದು ಬಾದಾಮಿ ಬನಶಂಕರಿ ಕ್ಷೇತ್ರದಲ್ಲಿ ಜರುಗುವ ಉಚಿತ ಸಾಮೂಹಿಕ ವಿವಾಹ, ಶ್ರೀ ಗಾಯತ್ರಿ ಸಮುದಾಯ ಭವನ ಹಾಗೂ ಶ್ರೀದೇವಲ ಯಾತ್ರಿ ನಿವಾಸ ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸೂಳೇಬಾವಿಯ ದೇವಾಂಗ ಸಮಾಜದ ಹಿರಿಯರಾದ ಲುಮ್ಮಣ್ಣ ಕಣಗಿ ಹೇಳಿದರು.

ಪಟ್ಟಣದ ನೇಕಾರ ಮುಖಂಡರಾದ ಏಕನಾಥ ಕೊಣ್ಣೂರ ಅವರ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಮದುರ್ಗ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಆಗಮಿಸಬೇಕು. ಮತ್ತು ಕಡು ಬಡವರಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಮಾಡಿಕೊಳ್ಳುವಂತೆ ಪ್ರೇರೆಪಿಸಬೇಕು ಎಂದು ಅವರು ಹೇಳಿದರು.

ಗುಳೇದಗುಡ್ಡದ ರಾಮಚಂದ್ರ ಹಾನಾಪೂರ ಅವರು ಮಾತನಾಡಿ, ಎಲ್ಲ ಕಾರ್ಯಗಳಿಗೆ ತನು ಮನ ಧನ ಸಹಾಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುಳೇಬಾವಿಯ ಬಸವಂತಪ್ಪ ವಡ್ಡೊಡಗಿ, ರಾಮದುರ್ಗದ ನೇಕಾರ ಮುಖಂಡರಾದ ಏಕನಾಥ ಕೊಣ್ಣೂರ, ವಿಠ್ಠಲ ಮುರುಡಿ, ದುರ್ವಾಸಪ್ಪ ಹೆಬ್ಬಳ್ಳಿ, ಶಂಕರ ಬೆನ್ನೂರ, ಐ. ಜಿ. ರಾಮದುರ್ಗ, ಶಿವಾನಂದ ಸೂಳಿಭಾವಿ, ರಾಮಚಂದ್ರ ಯಾದವಾಡ, ನಾಗೇಶ್ ಕೊಣ್ಣೂರ ಮುದಕವಿ ಗ್ರಾಮದ ಜೀವಪ್ಪ ಕಡ್ಡಿ ಉಪಸ್ಥಿತರಿದ್ದರು.

Comments