UK Suddi
The news is by your side.

ನಕಲಿ ಇನ್ಶುರೆನ್ಸ್ ಮುಂಬೈನ 800 ಜನರಿಗೆ ಪಂಗನಾಮ: ಆರೋಪಿಗಳು ಬೆಳಗಾವಿಯಲ್ಲಿ ಅಂದರ್

ಬೆಳಗಾವಿ: ನಗರದ ಕ್ಲಬ್ ರಸ್ತೆಯ ಖಾಸಗಿ ಕಂಪನಿಯೊಂದು ಮುಂಬೈನಲ್ಲಿ 800 ಜನರಿಗೆ ನಕಲಿ ದ್ವಿಚಕ್ರ ವಾಹನ ಇನ್ಶುರೆನ್ಸ್ ಗಳನ್ನು ಮಾರಿ ವಂಚಿಸಿದ್ದಾರೆ ಎಂದು ಆರೋಪದ ಮೇಲೆ ಮುಂಬೈ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.

ಇಲ್ಲಿನ ‌ಕ್ಲಬ್ ರಸ್ತೆಯಲ್ಲಿ ಪ್ರಧಾನ ಕಛೇರಿ ಹೊಂದಿದ್ದ ” ಒನ್ ಪಾಯಿಂಟ್ ಸಲ್ಯೂಷನ್ ಜನರಲ್ ಇನ್ಶುರೆನ್ಸ್ ” ಎಂಬ ಹೆಸರಿನ ಕಂಪನಿಯು ಮುಂಬೈನಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು ಎನ್ನಲಾಗಿದ್ದು ದ್ವಿಚಕ್ರ ವಾಹನ ಸವಾರರಿಗೆ ನಕಲಿ ಇನ್ಶುರೆನ್ಸ್ ಮಾರಾಟ ಮಾಡಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಬಂಧಿತರು ಬೆಳಗಾವಿಯ ಪ್ರಶಾಂತ ಸುತಾರ, ಇನಾಯತ್ ಬೇದ್ರೆಕರ್, ಹಾಗೂ ಮುಂಬೈ ವಾಸಿ ಗಜಾನನ ಪಾಟೀಲ್ ಆಗಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್ ನ ಮೂರನೇ ಯುನಿಟ್ ನಡೆಸುತ್ತಿದ್ದು ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ.