UK Suddi
The news is by your side.

ಪ್ರಕೃತಿಯ ಮಡಿಲಲ್ಲಿ ಸಾಹಿತ್ಯ ಸಮಾಗಮ.

ಧಾರವಾಡ:ಭೂಮಿ ಪ್ರತಿಷ್ಠಾನ, ಧಾರವಾಡದ ವತಿಯಿಂದ ಪ್ರಕೃತಿಯ ಮಡಿಲಲ್ಲಿ ಸಾಹಿತ್ಯ ಸಮಾಗಮ ತಿಂಗಳ ಕಾರ್ಯಕ್ರಮವನ್ನು ಕರ್ನಾಟಕ ವಿಶ್ವವಿದ್ಯಾಲಯದ ಬಟಾನಿಕಲ್ ಗಾರ್ಡನಲ್ಲಿ ಯಶಸ್ವಿಯಾಗಿ ಜರುಗಿತು.

ಇದೇ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮೀ ಮುದೇನೂರ ಅವರು ರವೀಂದ್ರನಾಥ ಠ್ಯಾಗೋರವರ ಗೀತಾಂಜಲಿ ಕವನ ಸಂಕಲನವನ್ನು ವಿಮರ್ಶೆ ಮಾಡಿದರು ನಂತರ ಡಾ. ಈರಣ್ಣ ಇಂಜನಗೇರಿಯವರು ಕನಕದಾಸರ ಚಿಂತನೆಗಳು ನಮ್ಮ ಕಾಲಕ್ಕೆ ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬ ವಿಷಯದ ಕುರಿತಾಗಿ ಮಾತನಾಡಿದರು.

ಡಾ.ಶಿವಾನಂದ ಟವಳಿ ಅವರು ಕುವೆಂಪು ಅವರ ಬೆರಳ್ಗೆ ಕೊರಳ್ ಎಂಬ ನಾಟಕದ ಕುರಿತು ಮಾತನಾಡಿದರು. ಲಾ¯ಸಾಬ ಪೆಂಡಾರಿ ಅವರು ಕಬೀರನ ದೊಹೆಗಳಲ್ಲಿ ಪ್ರಕರತಿ ಎಂಬ ವಿಷಯದ ಕುರಿತು ಮತ್ತು ಅಡವಿಸಿದ್ದೇಶ ಟವಳಿ ಅವರು ಕೆ.ಪಿಪೂರ್ಣಚಂದ್ರ ತೇಜಸ್ವಿಯವರ ಒಂದು ಬಳ್ಳಿಯ ಸುತ್ತ ಎಂಬ ಕಥೆಯ ಕುರಿತು ಮಾತನಾಡಿದರು.ಸುನೀಲ್ ಶಾನವಾಡ ಅವರು ಕೆ.ಎಸ್.ನರಸಿಂಹ ಅವರ ಮೈಸೂರ ಮಲ್ಲಿಗೆ ಎಂಬ ಕವನ ಸಂಕಲನದ ಕುರಿತುಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿವಶರಣ ಪರಪ್ಪಗೋಳ, ಡಾ.ನಿಖಿಲ್ ಮುರಗುಂಡೆ, ಬಸವರಾಜ ವಾಸನದ, ಮಹೇಂದ್ರಕೂಮಾರ, ಹಾಗೂ ಆನಂದ ಕುರಿಯರ ಸಾಹಿತ್ಯ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ಮತ್ತು ಅನುಭವವನ್ನು ಹಂಚಿಕೊಂಡರು. ಭಾಗವಹಿಸಿದ ಸರ್ವರಿಗೂ ಪುಸ್ತಕ ಪ್ರಮಾಣಪತ್ರಕಗಳನ್ನು ನೀಡಿ ಗೌರವಿಸಲಾಯಿತು.

Comments