UK Suddi
The news is by your side.

ಬಿಜೆಪಿ ಶಾಸಕ ಪ್ರೀತಮ್ ಗೌಡ ಬೆಂಬಲಿಗನಿಗೆ ಕಲ್ಲೇಟು..!

ಹಾಸನ: ಆಪರೇಷನ್ ಕಮಲದ ಆಡಿಯೋದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರೀತಮ್‍ ಗೌಡ ಮನೆಗೆ ಕಲ್ಲು ಎಸೆದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದ ವಿದ್ಯಾನಗರದಲ್ಲಿರುವ ಪ್ರೀತಂ ಗೌಡರ ಮನೆಗೆ ಜೆಡಿಎಸ್ರ ಕಾರ್ಯಕರ್ತರು ಮತ್ತಿಗೆ ಹಾಕಲು ಯತ್ನಿಸುತ್ತಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕಾಂಪೌಂಡ್ ಒಳಗಿದ್ದ ಪ್ರೀತಮ್‍ ಗೌಡ ಅವರ ಬೆಂಬಲಿಗರಿಗೆ ಕಲ್ಲು ತಾಗಿ ಗಾಯವಾಗಿದೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿಯೂ ನಡೆದಿದೆ.

Comments