UK Suddi
The news is by your side.

ಬ್ರೆಕಿಂಗ್: ಧರ್ಮಸ್ಥಳ ಮಹಾ ಮಸ್ತಕಾಭಿಷೇಕದಲ್ಲಿ ಕುಸಿದ ಚಪ್ಪರ: ಹಲವರಿಗೆ ಗಾಯ

ಬೆಳ್ತಂಗಡಿ(ದಕ್ಷಿಣ ಕನ್ನಡ): ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದಲ್ಲಿ ಪಂಚಮಹಾವೈಭವ ವೇದಿಕೆಯ ಚಪ್ಪರ ಕುಸಿದಿದೆ.

ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಹಾಕಿದ್ದ ಪೆಂಡಾಲ್ ಕುಸಿದು ಕೆಳಗೆ ಬಿದ್ದಿದ್ದು, ಅದರ ಅಡಿಯಲ್ಲಿ ಹಲವು ಜನರ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಚಪ್ಪರವನ್ನು ಬಾಹುಬಲಿ ತಪ್ಪಲಲ್ಲಿ ಹಾಕಲಾಗಿತ್ತು.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಜತೆಯಾಗಿ ಪೆಂಡಾಲ್ ತೆರವು ಮತ್ತು ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.