UK Suddi
The news is by your side.

ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ: ಶಾಸಕ ನಾಗೇಶ್

ಬೆಂಗಳೂರು: ಸಚಿವ ಸ್ಥಾನ ನೀಡದಿದ್ದಕ್ಕಾಗಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇತ್ತೀಚೆಗೆ ಹಿಂಪಡೆದ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು, ಪಕ್ಷದ ಸದಸ್ಯನಾಗಿ ಪಕ್ಷದ ನಿಯಮಾವಳಿಗಳನ್ನು ಪಾಲಿಸುತ್ತೆನೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ನೀಡಿದ್ದಾರೆ.

ಸಿದ್ದರಾಮಯ್ಯನವರ ನಿವಾಸ ಕಾವೇರಿಗೆ ತೆರಳಿ ಸರ್ಕಾರಕ್ಕೆ ಬೆಂಬಲ ಪತ್ರವನ್ನು ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಸಹ ಸದಸ್ಯರಾಗುವುದಾಗಿಯೂ ಪತ್ರವನ್ನು ನೀಡಿದ್ದಾರೆ. ಈ ವೇಳೆ ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಇದ್ದರು.

ಈ ಮೂಲಕ ಪಕ್ಷೇತರ ಶಾಸಕ ನಾಗೇಶ್ ಮನವೊಲಿಸಿ ತಮ್ಮತ್ತ ಸೆಳೆಯುವಲ್ಲಿ ಸಿದ್ದರಾಮಯ್ಯ ಸಕ್ಸಸ್ ಆಗಿದ್ದಾರೆ.

ಮತ್ತೊಬ್ಬ ಪಕ್ಷೇತರ ಶಾಸಕ ಆರ್ ಶಂಕರ್ ಸರ್ಕಾರಕ್ಕೆ ಮತ್ತೆ ಬೆಂಬಲವನ್ನು ಸೂಚಿಸುತ್ತಾರೊ ಇಲ್ಲವೋ ಅನ್ನುವುದು ಕಾದು ನೋಡಬೇಕಿದೆ.