UK Suddi
The news is by your side.

ರಾಜ್ಯದ ಆಡಳಿತ ಗೂಂಡಾ ಸರ್ಕಾರದ ಕೈಯಲ್ಲಿದೆ : ಬಿಜೆಪಿ ಆಕ್ರೋಶ

ಬೆಳಗಾವಿ: ಹಾಸನದ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಜೆಡಿಎಸ್ ಗೂಂಡಾಗಿರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗೂಂಡಾ ಆಡಳಿತ ನಡೆಸುತ್ತಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಶಾಸಕನ ಮನೆಗೆ ದಾಳಿ ಮಾಡಿದ ಜೆಡಿಎಸ್ ಕಾರ್ಯಕರ್ತರು ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಸುವ್ಯವಸ್ಥೆ ಕುಸಿದದ್ದನ್ನು ಸೂಚಿಸುತ್ತದೆ ಎಂದು ಅಸಮಧಾನ ವ್ಯಕ್ತವಾಯಿತು.

ರಾಜೇಂದ್ರ ಹರಕುಣಿ, ಸಂಜಯ ಪಾಟೀಲ, ರಾಜು ಟೋಪನ್ನವರ, ಗೂಳಪ್ಪ ಹೊಸಮನಿ, ಧನಂಜಯ ಜಾಧವ, ಪ್ರಭು ಹೂಗಾರ, ರಾಜು ಚಿಕ್ಕನಗೌಡ್ರ, ಶಿಲ್ಪಾ ಕೇಕರೆ ಇತರರು ಉಪಸ್ಥಿತರಿದ್ದರು.

Comments