UK Suddi
The news is by your side.

ಸದನದಲ್ಲಿ ಅತ್ಯಾಚಾರ ಚರ್ಚೆ: ಶಾಸಕಿ ಅಂಜಲಿ ನಿಂಬಾಳ್ಕರ ಆಕ್ಷೇಪ, ಕ್ಷಮೆ ಕೇಳಿದ ಸ್ಪೀಕರ್.

ಬೆಳಗಾವಿ: ಮೊನ್ನೆಯ ದಿನದ ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ ರಮೇಶಕುಮಾರ ಅವರ ಅತ್ಯಾಚಾರ ಸಂಬಂಧಿ ಹೇಳಿಕೆ ಬಗ್ಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಸ್ಪೀಕರ್ ಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿದ್ದೀರಿ, ಈ ಬಗ್ಗೆ ಅನೇಕ ಮಹಿಳೆಯರು ತಮ್ಮ ಬಳಿ ದೂರಿದ್ದಾರೆ. ಹಿರಿಯರಾದ ತಮ್ಮ ನಡವಳಿಕೆ, ವ್ಯಕ್ತಿತ್ವ, ನುಡಿಗಳು ಇತರರಿಗೆ ಆದರ್ಶವಾಗಿರುತ್ತವೆ. ತಮ್ಮ ಅತ್ಯಾಚಾರ ಸಂಬಂಧಿ ಹೇಳಿಕೆಯನ್ನಿ ಸದನದ ಕಡತದಿಂದ ತೆಗೆಯಬೇಕು ಎಂದು ಕೋರಿದ್ದಾರೆ.

ಕ್ಷಮೆ ಕೋರಿದ ಸ್ಪೀಕರ್: ಇದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆ ಸಚಿವಾಲಯದ ಅಧಿಕಾರಿಗಳಿಗೆ ತಾವು ಆಡಿದ ಅತ್ಯಾಚಾರ ಕುರಿತ ಹೇಳಿಕೆಗಳನ್ನು ಸದನದ ನಡಾವಳಿ ಕಡತದಿಂದ ತೆಗೆದು ಹಾಕಲು ಸೂಚಿಸಿದ್ದರಲ್ಲದೆ. ತಮ್ಮ ಹೇಳಿಕೆಯಿಂದ ಯಾರ ಮನಸ್ಸಿಗಾದರು ನೋವಾಗಿದ್ದರೆ ಕ್ಷೆಮೆ ಕೋರುತ್ತೇನೆ ಎಂದು ಹೇಳಿದ್ದಾರೆ.