UK Suddi
The news is by your side.

VTU ವಿಭಜನೆ ಮಾಡಲು ಮುಂದಾಗಿರುವದು ಖಂಡನೀಯ.

ಚಿಕ್ಕೋಡಿ(ಬೆಳಗಾವಿ):ಇಪ್ಪತು ವರ್ಷಗಳಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಚಿಕ್ಕೋಡಿ ಭಾಗದ ಜನರ ಬೇಡಿಕೆಯಾಗಿದ್ದು, ಇದಕ್ಕೆ ಸ್ಪಂದಿಸದ ಮುಖ್ಯ ಮಂತ್ರಿಗಳು ತರಾತುರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆ ಮಾಡಲು ಮುಂದಾಗಿದ್ದಾರೆ .

ಕುಂದಾನಗರಿಯ ವಿದ್ಯಾಕಾಶಿಯಾದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಾಹಾ ವಿದ್ಯಾಲಯದ ವಿಭಜನೆಗೆ ಚಂದ್ರಕಾಂತ ಹುಕ್ಕೇರಿ ಇವರು ಖಂಡಿಸಿದರು.

ಬೆಳಗಾವಿಯ ಹೊರವಲಯದಲ್ಲಿ 115 ಎಕರೆ ವಿಶಾಲ ಸುಂದರವಾದ ತಾಂತ್ರಿಕ ವಿಶ್ವವಿದ್ಯಾಲಯ ವಿಂಗಡಿಸಿ ಹಾಸನ ಪ್ರದೇಶ ಸ್ಥಳಾಂತರಿಸುವುದಕ್ಕೆ ಖಂಡನೆಯಾಗಿದೆ ಎಂದು ಸಮಾಜ ಸೇವಕ ಅನ್ನಧಾನ ಸಮಿತಿಯ ಸಂಸ್ಥಾಪಕರಾದ ಚಂದ್ರಕಾಂತ ಹುಕ್ಕೇರಿ ಇವರು ತೀವ್ರವಾಗಿ ಖಂಡಿಸಿದ್ದಾರೆ.ಇದನ್ನು ವಿಭಜಿಸುವ ಪ್ರಯತ್ನದಿಂದ , ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಕು ಮತ್ತು ಚಿಕ್ಕೋಡಿ ಜಿಲ್ಲೆ ಮಾಡಲೇಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಮುಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸಬಾರದೆಂಬ ಕೂಗು ಹೆಚ್ಚಾಗುವ ಸಾದ್ಯತೆ ಇದೆ ಇದರಿಂದ ಸರಕಾರಕ್ಕೆ ಅಪಾಯವಿದೆ . ಇದನ್ನು ಸಮಿಶ್ರ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ಘೋಸಿಸಿದ್ದನ್ನು ಕೂಡಲೇ ರದ್ದು ಮಾಡಬೇಕೆಂದು ಚಂದ್ರಕಾಂತ ಹುಕ್ಕೇರಿಯವರು ಒತ್ತಾಯಿಸಿದ್ದಾರೆ.ಅಖಂಡ ವಿ . ವಿ ಒಡೆದು ಇದರ ಪ್ರತಿಷ್ಠೆ ಹಾಳು ಮಾಡಲು ಹೊರಟಿರುವ ಸರಕಾರಕ್ಕೆ ದಿಕ್ಕಾರ ಎಂದು ಹೇಳಿದರು.

Comments