UK Suddi
The news is by your side.

ಎಣ್ಣೆ ಕಿಕ್ಕಿಗೂ ಬಿತ್ತು ಕೊಕ್ಕೆ-ಎಣ್ಣೆ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ.

ಸಾಂದರ್ಭಿಕ ಚಿತ್ರ.

ಬೆಂಗಳೂರು:ದೇಶಾದ್ಯಂತ ಲೋಕಸಭಾ ಚುನಾವಣೆ ಗಾಳಿ ಜೋರಾಗಿ ಬಿಸುತ್ತಿದೆ.ಇತ್ತ ಚುನಾವಣಾ ಆಯೋಗ ಎಣ್ಣೆ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದೆ.ಏನು.? ಅಂತೀರಾ..?

ಈ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಟಲಿ ಆಮಿಷ ಒಡ್ಡಿ ವೋಟು ಗಿಟ್ಟಿಸಲು ಮುಂದಾಗುವವರು ಇದ್ದಾರೆ ಎಂದು ಚುನಾವಣಾ ಆಯೋಗ ಮದ್ಯ ವ್ಯಾಪಾರಕ್ಕೆ ಭರ್ಜರಿ ಸರ್ಜರಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಬಾರಿ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಅಬಕಾರಿ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಮಾದರಿ ನೀತಿ ಸಂಹಿತೆ ಮದ್ಯದ ಮೇಲೆ:

1)ಬಾರ ಅಂಗಡಿಯನ್ನು ಬೆಳಗ್ಗೆ 10.30ಕ್ಕೆ ತೆರೆಯಬೇಕು. ರಾತ್ರಿ ನಿಗಧಿತ ಅವಧಿಗೆ ಮುಚ್ಚಬೇಕು.

2)ನಿಗದಿತ ಸಮಯಕ್ಕೂ ಮುಂಚೆ ಬಾರ್ ಓಪನ್ ಮಾಡೋದು,ತಡ ರಾತ್ರಿವರೆಗೆ ಬಾರ್ ಅಂಗಡಿ ಮುಚ್ಚದೆ ಇದ್ದರೆ ಅಂತಹ ಬಾರ್‍ಗಳ ಮೇಲೆ ದಂಡ ಪ್ರಯೋಗ ತಪ್ಪಿದ್ದಲ್ಲ ನೆನಪಿರಲಿ.
3)ಪ್ರತಿ ಬಾರ್ ಮೇಲೆ ಹದ್ದಿನ ಕಣ್ಣಿಡಲು ಸ್ಪೆಷಲ್ ಟೀಮ್ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
4)ಒಬ್ಬ ವ್ಯಕ್ತಿ 2.3 ಲೀಟರ್‍ನಷ್ಟು ಮದ್ಯ ಖರೀದಿ ಮಾಡಬಹುದು ಅಷ್ಟೇ.
5)ಪ್ರತಿನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಮದ್ಯ ಮಾರಾಟ,ವ್ಯಾಪಾರದ ಸಂಪೂರ್ಣ ವಿವರ ನೀಡಬೇಕು. 6)ಪ್ರತಿ ದಿನದ ವ್ಯಾಪಾರದ ದಾಖಲೆಯನ್ನು ಅಬಕಾರಿ ಇಲಾಖೆಯವರಿಗೆ ಕಳಿಸಬೇಕು.
7)ಅಧಿಕಾರಿಗಳ ಕಣ್ಣು ತಪ್ಪಿಸಿ ಮದ್ಯ ಮಾರಾಟ ಮಾಡಿದರೆ ಸ್ಪೆಷಲ್ ವಿಂಗ್ಸ್ ಕೈಯಲ್ಲಿ ಸಿಕ್ಕು ಬಿದ್ದರೆ ಕ್ರಮ ಗ್ಯಾರಂಟಿ.

Comments