UK Suddi
The news is by your side.

ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚು ಬೇಡಿಕೆಯಿದೆ:ಕೇಶವ ನಡಕರ್ಣಿ

ಧಾರವಾಡ:ಪತ್ರಿಕೋದ್ಯಮ ಈ ಮೊದಲು ಕೇವಲ ಹವ್ಯಾಸವಾಗಿತ್ತು. ಆದರೆ ಈಗ ಲಾಭದಾಯಕ ಉದ್ಯಮವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಡಿಜಿಟಲ್ ಮಾಧ್ಯಮ ಸಲಹೆಗಾರ ಕೇಶವ ನಡಕರ್ಣಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪತ್ರಿಕೋದ್ಯಮ ದಿನಪತ್ರಿಕೆಗಳಿಂದ ಆರಂಭವಾಗಿ ಈಗ ನವ ಮಾಧ್ಯಮದ ಹಂತ ತಲುಪಿದೆ. ಕಾಲ ಕಳೆದಂತೆ ಹೊಸ ಆವಿಷ್ಕಾರಗಳು, ವೈಜ್ಞಾನಿಕ ಸಂಶೋಧನೆಗಳು ಮಾಧ್ಯಮ ಕಾರ್ಯಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ಪಬ್ಲಿಕ್ ನೆಕ್ಸ್ಟ್ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಡಿಜಿಟಲ್ ಮಾಧ್ಯಮವಾಗಿದೆ. ಇದು ಸಾರ್ಟಅಪ್ ಯೋಜನೆ ಅಡಿ ಆರಂಭವಾದ ಮಾಧ್ಯಮ. ಇದರಲ್ಲಿ ಹೆಚ್ಚಿಕೆ ಉದ್ಯೋಗ ಅವಕಾಶಗಳಿದ್ದು, ಯುವ ಪತ್ರಕರ್ತರು, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹಿಂದಿನ ದಶಕಗಳು ದಿನಪತ್ರಿಕೆ, ರೆಡಿಯೋ ಹಾಗೂ ಸುದ್ದಿ ವಾಹಿನಿಗಳ ಪರ್ವಕಾಲಕ್ಕೆ ಸಾಕ್ಷಿಯಾಗಿತ್ತು. ಆದರೆ ಈಗ ನವ ಮಾಧ್ಯಮಗಳ ಕಾಲ. ಸ್ಮಾರ್ಟ ಫೋನ್‍ನಲ್ಲಿ ಸ್ಥಳೀಯದಿಂದ ಅಂತರಾಷ್ಟ್ರೀಯ ಮಟ್ಟದ, ಎಲ್ಲ ಕ್ಷೇತ್ರಗಳ ಸುದ್ದಿ ಸಮಾಚಾರಗಳು ನಮ್ಮ ಬೆರಳ ತುದಿಯಲ್ಲಿ ಲಭ್ಯ. ಅನೇಕರು ಇದರಲ್ಲಿ ಉದ್ಯೋಗ ಕಂಡುಕೊಡಿದ್ದಾರೆ ಎಂದು ಹೇಳಿದರು.

ಪ್ಲಬಿಕ್ ನೆಕ್ಸ್ಟ ಧಾರವಾಡ ವರದಿಗಾರ ಪ್ರವೀಣ ಹೂಗಾರ, ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಮ್. ಚಂದೂನವರ, ಉಪನ್ಯಾಸಕ ಡಾ. ಮಂಜುನಾಥ ಅಡಿಗಲ್, ವಿದ್ಯಾರ್ಥಿಗಳು ಹಾಜರಿದ್ದರು.

-ನಿತೀಶ್ ಡಂಬಳ.

Comments